ಕರ್ನಾಟಕ

karnataka

ETV Bharat / sports

ಬಿಸಿಸಿಐಗೆ ಹೊಸ ಬಾಸ್​ ಖಚಿತ.. ದಾದಾ ಜಾಗಕ್ಕೆ ಕನ್ನಡಿಗ ರೋಜರ್​ ಬಿನ್ನಿ

ಕನ್ನಡಿಗ ರೋಜರ್​ ಬಿನ್ನಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗುವುದು ಖಚಿತವಾಗಿದೆ. ಇಂದು ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

roger binny bcci new president
ಬಿಸಿಸಿಐಗೆ ಹೊಸ ಬಾಸ್​ ಖಚಿತ

By

Published : Oct 11, 2022, 12:45 PM IST

ಬಿಸಿಸಿಐ ಮುಖ್ಯಸ್ಥ ಗಂಗೂಲಿ ಅವರ ಅವಧಿ ಮುಗಿಯುತ್ತಿದ್ದಂತೆ ನೂತನ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಊಹಾಪೋಹಗಳಿಗೆ ಬಹುತೇಕ ತೆರೆ ಬಿದ್ದಿದೆ. 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯ, ಕನ್ನಡಿಗ ರೋಜರ್ ಬಿನ್ನಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸೌರವ್​ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಗಾದಿಗೆ ಮತ್ತೊಮ್ಮೆ ಸ್ಪರ್ಧಿಸದ ಕಾರಣ ಅವರ ಜಾಗಕ್ಕೆ ಕನ್ನಡಿಗ ರೋಜರ್​ ಬಿನ್ನಿ ಸ್ಪರ್ಧಿಸಲಿದ್ದು, ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇನ್ನುಳಿದಂತೆ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಜಯ್ ಷಾ ಮುಂದುವರಿಯಲಿದ್ದು, ಅವರೂ ಕೂಡ ಅರ್ಜಿ ಸಲ್ಲಿಸಲಿದ್ದಾರೆ.

ಆಶಿಶ್ ಶೇಲಾರ್ ಖಜಾಂಚಿಯಾಗಿ ಆಯ್ಕೆಯಾಗಲಿದ್ದಾರೆ. ರಾಜೀವ್ ಶುಕ್ಲಾ ಅವರು ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅರುಣ್ ಧುಮಾಲ್ ಐಪಿಎಲ್​ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಬಿಸಿಸಿಐ ಅಧ್ಯಕ್ಷೀಯ ಚುನಾವಣೆಗೆ ಇಂದು ಮತ್ತು ನಾಳೆ ನಾಮನಿರ್ದೇಶನಗಳನ್ನು ಸಲ್ಲಿಸಬಹುದು. 13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 14ರಂದು ನಾಮಪತ್ರ ಹಿಂಪಡೆಯಲು ಅವಕಾಶ, 18ರಂದು ಚುನಾವಣೆ ನಡೆಯಲಿದ್ದು ಅದೇ ದಿನ ಸಂಜೆ ಫಲಿತಾಂಶ ಪ್ರಕಟವಾಗಲಿದೆ. ರೋಜರ್​ ಬಿನ್ನಿ ಅವರು ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಓದಿ:India vs South Africa ODI: ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ.. ಗೆದ್ದವರಿಗೆ ಸರಣಿ ಸಿಹಿ

ABOUT THE AUTHOR

...view details