ಬೆಂಗಳೂರು :ವಿಶ್ವದಲ್ಲೇ ಅತ್ಯಂತ ವೇಗದ ಎಸೆತ ಹಾಕಿದ ದಾಖಲೆ ಹೊಂದಿರುವ ಪಾಕಿಸ್ತಾನದ ಶೋಯಬ್ ಅಖ್ತರ್ ಕನ್ನಡಿಗ ರಾಬಿನ್ ಉತ್ತಪ್ಪರಿಗೆ ಬೀಮರ್ ಹಾಕುವ ಬೆದರಿಕೆಯೊಡ್ಡಿದ್ದನ್ನು ಕನ್ನಡಗ ನೆನಪಿಸಿಕೊಂಡಿದ್ದಾರೆ.
5 ಪಂದ್ಯಗಳ ಸರಣಿಯನ್ನಾಡಲು ಪಾಕಿಸ್ತಾನ 2007ರಲ್ಲಿ ಭಾರತಕ್ಕೆ ಬಂದಿತ್ತು. ಆ ಸರಣಿಯಲ್ಲಿ ಉತ್ತಪ್ಪ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ, ಅವರು 5 ಪಂದ್ಯಗಳಲ್ಲಿ ಕೇವಲ 31 ರನ್ಗಳಿಸಿದ್ದರು. ಅವರ ಬೆಸ್ಟ್ ಸ್ಕೋರ್ 19 ಆಗಿತ್ತು.
ಆದರೆ, ನಂತರ ಭಾರತ ತಂಡದಿಂದ ಹೊರಬಿದ್ದ ಅವರಿಗೆ ಮತ್ತೊಂದು ಅವಕಾಶ ಸಿಗಲೇ ಇಲ್ಲ. ಆದರೆ, ಈ ಸರಣಿಯ ವೇಳೆ ನಡೆದ ಸ್ವಾರಸ್ಯಕರ ಸಂಗತಿಯನ್ನು ರಾಬಿನ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
"2007ರ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಗೆಲ್ಲಲು 25 ಎಸೆತಗಳಲ್ಲಿ 12 ರನ್ ಗಳಿಸಬೇಕಿತ್ತು. ಈ ಸಂದರ್ಭದಲ್ಲಿ ನಾನು ಮತ್ತು ಇರ್ಫಾನ್ ಪಠಾಣ್ ಬ್ಯಾಟಿಂಗ್ ಮಾಡುತ್ತಿದ್ದೆವು. ಆ ವೇಳೆ ಅಖ್ತರ್ ನನಗೆ ಯಾರ್ಕರ್ ಎಸೆದಿದ್ದರು ಎಂದು ನನಗೆ ನೆನಪಿದೆ.
ಆದ್ರೆ, ಆ ಎಸೆತವನ್ನು ದಂಡಿಸುವಲ್ಲಿ ನಾನು ವಿಫಲನಾದೆ. ನೇರವಾಗಿ ಬಂದ ಆ ಎಸೆತವನ್ನು ಡಿಫೆಂಡ್ ಮೂಲಕ ತಡೆಯುವಲ್ಲಿ ಯಶಸ್ವಿಯಾದೆ. ಆ ಎಸೆತದ 154ರ ವೇಗದಲ್ಲಿತ್ತು. ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದ್ದೆ. ನಂತರ ನಮಗೆ ಗೆಲ್ಲಲು 3 ಅಥವಾ 4 ರನ್ ಬೇಕಾಗಿದ್ದವು.