ಹೈದರಾಬಾದ್: ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಿಂದ ವೈದ್ಯಕೀಯ ಚಿಕಿತ್ಸೆಯಲ್ಲಿರುವ ರಿಷಬ್ ಪಂತ್ ಸಮಾಜಿಕ ಜಾಲತಾಣದಲ್ಲಿ ಪೋಸ್ಟವೊಂದನ್ನು ಮಾಡಿದ್ದಾರೆ. ಇದು ಅಪಘಾತದ ನಂತರ ಅವರು ಮಾಡಿದ ಮೊದಲ ಪೋಸ್ಟ್ ಆಗಿದೆ. ಅವರು ಇದರಲ್ಲಿ ಇಬ್ಬರಿಗೆ ನಾನು ಋಣಿಯಾಗಿದ್ದೇನೆ ಎಂದು ಬರೆದು ಕೊಂಡಿದ್ದಾರೆ.
ಹೊಸ ವರ್ಷಕ್ಕೂ ಮುನ್ನ ತಾಯಿಗೆ ಸರ್ಪರೈಸ್ ಕೊಡಲೆಂದು ಡಿಸೆಂಬರ್ 30ರಂದು ಮನೆಗೆ ಬರುವ ವೇಳೆ ರಾತ್ರಿ ಅಪಘಾತ ಸಂಭವಿಸಿತ್ತು. ಸಂಭವಿಸಿದ ಅಪಘಾತದಿಂದ ರಜತ್ ಕುಮಾರ್ ಮತ್ತು ನಿಶು ಕುಮಾರ್ ರಿಷಬ್ ಪಂತ್ ಅವರನ್ನು ರಕ್ಷಿಸಿದರು. ತಮ್ಮ ಅಪಘಾತದ ನಂತರ ಅವರ ಮೊದಲ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಭಾರತೀಯ ವಿಕೆಟ್ ಕೀಪರ್ ಅವರಿಬ್ಬರ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಮತ್ತು "ನನ್ನ ಜೀವನದುದ್ದಕ್ಕೂ ನಾನು ನಿಮಗೆ ಋಣಿಯಾಗಿದ್ದೇನೆ" ಎಂದು ಬರೆದಿದ್ದಾರೆ. ಇದರ ಜೊತೆಗೆ ಪಂತ್ ಬಿಸಿಸಿಐ ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಭೀಕರ ಅಪಘಾತ ನಡೆದು ಬಹಳ ಸಮಯ ಕಳೆದಿದೆ ರಿಷಬ್ ಪಂತ್ ಹೇಗಿದ್ದಾರೆ?: ಸ್ಟಂಪರ್-ಬ್ಯಾಟರ್ ಯಾವಾಗ ಮೈದಾನಕ್ಕೆ ಪ್ರವೇಶಿಸಬಹುದು? ಅಭಿಮಾನಿಗಳ ಕುತೂಹಲಕ್ಕೆ ಕೊನೆಯೇ ಇಲ್ಲ ಪಂತ್ ಅವರ ದೈಹಿಕ ಸ್ಥಿತಿಯ ಸುದ್ದಿ ಆಸ್ಪತ್ರೆ, ವೈದ್ಯರು ಅಥವಾ ವಿವಿಧ ಮಾಧ್ಯಮಗಳ ಮೂಲಕ ಕಿವಿಗೆ ಬಂದರೂ ಕ್ರಿಕೆಟಿಗರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ, ಇಂದು ಪಂತ್ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಮಾಡಿದ್ದಾರೆ.
ಅಪಘಾತದ ನಂತರ ತನ್ನ ಮೊದಲ ಇನ್‌ಸ್ಟಾ ಪೋಸ್ಟ್‌ನಲ್ಲಿ ಪಂತ್ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿ ಹೀಗೆ ಬರೆದಿದ್ದಾರೆ, "ನಿಮ್ಮ ಬೆಂಬಲ ಮತ್ತು ಶುಭಾಶಯಗಳಿಂದ ನಾನು ವಿನಮ್ರನಾಗಿದ್ದೇನೆ. ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ನಾನು ಚೇತರಿಸಿಕೊಳ್ಳುವ ಹಾದಿಯಲ್ಲಿದ್ದೇನೆ. ನಾನು ಬಲಶಾಲಿಯಾಗಿದ್ದೇನೆ ಮತ್ತು ಪ್ರತಿದಿನ ಆರೋಗ್ಯ ಸ್ವಲ್ಪಮಟ್ಟಿಗೆ ಉತ್ತಮಗೊಳ್ಳುತ್ತಿದೆ. ಕಠಿಣ ಸಮಯದಲ್ಲಿ ನಿಮ್ಮ ಬೆಂಬಲ, ಧನಾತ್ಮಕ ಶಕ್ತಿಗೆ ನಾನು ಕೃತಜ್ಞನಾಗಿದ್ದೇನೆ" ಎಂದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರು ಶತಕಗಳನ್ನು ಗಳಿಸಿರುವ ವಿಕೆಟ್‌ಕೀಪರ್ ಪಂತ್ ಟ್ವೀಟ್ ಮಾಡಿ ಬಿಸಿಸಿಐ ಮತ್ತು ಉತ್ತರಾಖಂಡ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳಿಗೂ ಧನ್ಯವಾದ ಹೇಳಿದ್ದಾರೆ. ಆದರೆ ಅವರ ಮೂರನೇ ಟ್ವೀಟ್ನಲ್ಲಿ ಅಪಘಾತದ ಸ್ಥಳದಿಂದ ತನ್ನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ ಇಬ್ಬರ ಫೋಟೋವನ್ನು ಹಾಕಿ "ನಾನು ಎಲ್ಲರಿಗೂ ಪ್ರತ್ಯೇಕವಾಗಿ ಧನ್ಯವಾದ ಹೇಳಲು ಸಾಧ್ಯವಾಗದಿರಬಹುದು. ಆದರೆ, ಈ ಇಬ್ಬರು ವೀರರಿಗೆ ನಾನು ಧನ್ಯವಾದ ಹೇಳದಿರಲಾರೆ. ನನ್ನನ್ನು ರಕ್ಷಿಸಿ, ಅಪಘಾತದ ಸ್ಥಳದಿಂದ ಆಸ್ಪತ್ರೆಗೆ ಸೇರಿಸಿದ ರಜತ್ ಕುಮಾರ್ ಮತ್ತು ನಿಶು ಕುಮಾರ್ ನಾನು ನಿಮಗೆ ಚಿರ ಋಣಿ" ಎಂದಿದ್ದಾರೆ.
ಡಿಸೆಂಬರ್ 30 ರಂದು, ರಿಷಬ್ ಪಂತ್ ದೆಹಲಿಯಿಂದ ರೂರ್ಕಿಗೆ ಹಿಂದಿರುಗುವಾಗ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತಕ್ಕೊಳಗಾದರು. ಅವರ ಮರ್ಸಿಡಿಸ್ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿತ್ತು. ಕಿಟಕಿಯ ಗಾಜು ಒಡೆದು ಪಂತ್ ಅವರು ತಮ್ಮ ಪ್ರಾಣ ಉಳಿಸಿಕೊಂಡಿದ್ದರು. ಮೊದಲಿಗೆ ಅವರು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದರು. ಜನವರಿ 4 ರಂದು ಮುಂಬೈನ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಯೇ ಪಂತ್ ಕಾಲಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈಗ ಅವರು ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿಯ ಬ್ಯಾಟ್ ಬೆಲೆ ಎಷ್ಟು..? ವಿಶೇಷತೆಗಳೇನು ಗೊತ್ತಾ?