ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್‌ನಲ್ಲಿ ಅಭ್ಯಾಸ ಪಂದ್ಯ: ರೋಹಿತ್​ ಔಟಾಗಿದ್ದಕ್ಕೆ ಸಂಭ್ರಮಿಸಿದ ಪಂತ್​, ಬೂಮ್ರಾ! - ಇಂಗ್ಲೆಂಡ್​ ಕೌಂಟಿ ವಿರುದ್ಧ ಭಾರತ ಅಭ್ಯಾಸ ಪಂದ್ಯ

ಜುಲೈ 1 ರಿಂದ ನಡೆಯುವ ಇಂಗ್ಲೆಂಡ್​ ವಿರುದ್ಧದ ಏಕೈಕ ಟೆಸ್ಟ್​ಗೆ ಅಭ್ಯಾಸ ನಡೆಸುತ್ತಿರುವ ಭಾರತ ತಂಡ ಲೈಸೆಸ್ಟರ್​ಶೈರ್​ ಕೌಂಟಿ ತಂಡದ ಎದುರು ಅಭ್ಯಾಸ ಪಂದ್ಯವನ್ನಾಡುತ್ತಿದೆ.

ರೋಹಿತ್​ ಔಟಾಗಿದ್ದಕ್ಕೆ ಸಂಭ್ರಮಿಸಿದ ಪಂತ್​, ಬೂಮ್ರಾ!?
ರೋಹಿತ್​ ಔಟಾಗಿದ್ದಕ್ಕೆ ಸಂಭ್ರಮಿಸಿದ ಪಂತ್​, ಬೂಮ್ರಾ!?

By

Published : Jun 23, 2022, 7:26 PM IST

ಇಂಗ್ಲೆಂಡ್​ ವಿರುದ್ಧ ಮರುನಿಗದಿಯಾದ ಏಕೈಕ ಟೆಸ್ಟ್​ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡ, ಲೈಸೆಸ್ಟರ್‌ಶೈರ್ ಕೌಂಟಿ ವಿರುದ್ಧ ಅಭ್ಯಾಸ ಪಂದ್ಯವನ್ನಾಡುತ್ತಿದೆ. ಇಂದು ನಡೆದ ದಿನದಾಟದಲ್ಲಿ ರೋಹಿತ್​ ಶರ್ಮಾ, ರೋಮನ್​ ವಾಕರ್​ ಎಸೆತವನ್ನು ಪುಲ್​ ಮಾಡಿದಾಗ ಆಕಾಶಕ್ಕೆ ಚಿಮ್ಮಿದ ಬಾಲ್​ ಅಬಿದಿನೆ ಸಕಂಡೆ ಕೈ ಸೇರಿತು. ಈ ವೇಳೆ ರಿಷಬ್​ ಪಂತ್​, ಜಸ್ಪ್ರೀತ್​ ಬೂಮ್ರಾ ಸಂಭ್ರಮಿಸಿದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಔಟಾದರೆ ಪಂತ್​, ಬೂಮ್ರಾ ಯಾಕೆ ಸಂಭ್ರಮಿಸಿದರು ಅಂತೀರಾ?. ಲೈಸೆಸ್ಟರ್​ನ ಗ್ರೇಸ್​ ರೋಡ್​ ಮೈದಾನದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಲೈಸೆಸ್ಟರ್‌ಶೈರ್ ಕೌಂಟಿ ತಂಡದಿಂದ ರಿಷಬ್​ ಪಂತ್​, ಚೇತೇಶ್ವರ್ ಪೂಜಾರಾ, ಜಸ್ಪ್ರೀತ್​ ಬೂಮ್ರಾ, ಪ್ರಸಿದ್ಧ್​ ಕೃಷ್ಣ ಕಣಕ್ಕಿಳಿದು ಅಭ್ಯಾಸ ನಡೆಸುತ್ತಿದ್ದಾರೆ.

ರೋಹಿತ್​ ಶರ್ಮಾ 25 ರನ್​ ಗಳಿಸಿ ಆಡುತ್ತಿದ್ದಾಗ ರೋಮನ್​ ವಾಕರ್ ಬೌಲಿಂಗ್​ನಲ್ಲಿ ಪುಲ್​ ಮಾಡಲು ಹೋಗಿ ಔಟಾದರು. ಈ ವೇಳೆ ಆಟಗಾರರನ್ನು ಹುರಿದುಂಬಿಸಲು ರಿಷಬ್​ ಪಂತ್​ ಮತ್ತು ಬೂಮ್ರಾ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಲೈಸೆಸ್ಟರ್‌ಶೈರ್ ಕೌಂಟಿ ಕ್ರಿಕೆಟ್​ ಸಂಸ್ಥೆ ತನ್ನ ಟ್ವಿಟರ್​ ಹ್ಯಾಂಡಲ್​ನಲ್ಲಿ ಶೇರ್​ ಮಾಡಿದೆ.

ಮಳೆಯಿಂದ ಈ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ವಿರಾಟ್​ ಕೊಹ್ಲಿ 32 ರನ್​ ಬಾರಿಸಿದ್ದು ಲಯಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಅಲ್ಲದೇ ಪ್ರಸಿದ್ಧ್​ ಕೃಷ್ಣ ಎಸೆತದಲ್ಲಿ ಶ್ರೇಯಸ್​ ಅಯ್ಯರ್​ ಸೊನ್ನೆಗೆ ಔಟಾದರು.

ಇದನ್ನೂ ಓದಿ:ರಣಜಿ ಫೈನಲ್ 2ನೇ ದಿನದಾಟ​: ಮುಂಬೈಗೆ ಸರ್ಫರಾಜ್​ ಶತಕದ ಬಲ​, ಮಧ್ಯಪ್ರದೇಶ 1 ವಿಕೆಟ್​ಗೆ 123

ABOUT THE AUTHOR

...view details