ಲಂಡನ್: ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಭಾರತ ತಂಡದಲ್ಲಿರುವ ಅಪಾಯಕಾರಿ ಬ್ಯಾಟ್ಸ್ಮನ್ ಹಾಗೂ ಗೇಮ್ ಚೇಂಜರ್ ಎಂದು ನ್ಯೂಜಿಲ್ಯಾಂಡ್ ತಂಡದ ಬೌಲಿಂಗ್ ಕೋಚ್ ಶೇನ್ ಜರ್ಗನ್ಸೆನ್ ಅಭಿಪ್ರಾಯ ಪಟ್ಟಿದ್ದಾರೆ.
ಜರ್ಗನ್ಸೆನ್ ಪ್ರಕಾರ ರಿಷಭ್ ಪಂತ್ ಎದುರಾಳಿಯಿಂದ ಪಂದ್ಯವನ್ನು ಯಾವುದೇ ಸಮಯದಲ್ಲಾದರೂ ಏಕಾಂಗಿಯಾಗಿ ಕಸಿದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ವಿಶ್ವದ ನಂಬರ್ 1 ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಪಂತ್ರಿಂದ ಉಂಟಾಗುವ ಪರಿಣಾಮದ ಬಗ್ಗೆ ನ್ಯೂಜಿಲ್ಯಾಂಡ್ ತಂಡ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದ್ದಾರೆ.
" ಪಂತ್ ಅತ್ಯಂತ ಅಪಾಯಕಾರಿ ಆಟಗಾರನಾಗಿದ್ದು, ಅವರು ಏಕಾಂಗಿಯಾಗಿ ಆಟವನ್ನು ಬದಲಾಯಿಸಬಲ್ಲರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಅದನ್ನು ಅದ್ಭುತವಾಗಿ ಮಾಡಿದನ್ನು ನಾವು ನೋಡಿದ್ದೇವೆ. ಅವರು ಅತ್ಯಂತ ಸಕಾರಾತ್ಮಕ ಮನಸ್ಸಿನವರು, ಆದರೂ, ಅವರ ವಿಕೆಟ್ ತೆಗೆದುಕೊಳ್ಳುವ ಅವಕಾಶ ನಮ್ಮ ಬೌಲರ್ಗಳಿಗೆ ಬರುತ್ತದೆ" ಎಂದು ಜರ್ಗೆನ್ಸನ್ ಆಂಗ್ಲ ಪತ್ರಿಕೆ ಟೆಲಿಗ್ರಾಫ್ಗೆ ತಿಳಿಸಿದ್ದಾರೆ.