ಕರ್ನಾಟಕ

karnataka

By

Published : Nov 18, 2021, 6:03 PM IST

Updated : Nov 18, 2021, 7:47 PM IST

ETV Bharat / sports

ಟೀಂ ಇಂಡಿಯಾ ಕೋಚ್‌ ಹುದ್ದೆಗೆ ನನಗೂ ಆಫರ್ ಬಂದಿತ್ತು: ರಿಕಿ ಪಾಂಟಿಂಗ್‌

ಟೀಂ ಇಂಡಿಯಾ ಕೋಚ್​ (Team India Coach) ಆಗಿ ಸೇವೆ ಸಲ್ಲಿಸುವಂತೆ ನನಗೂ ಆಫರ್​ ಬಂದಿತ್ತು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್​ ರಿಕಿ ಪಾಂಟಿಂಗ್ (Ricky Ponting) ತಿಳಿಸಿದರು.

Ricky Ponting
Ricky Ponting

ಹೈದರಾಬಾದ್​:ನ್ಯೂಜಿಲ್ಯಾಂಡ್​​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಕೋಚ್​ ರಾಹುಲ್​ ದ್ರಾವಿಡ್​ ಯುಗಾರಂಭವಾಗಿದೆ. ಇದೇ ವಿಚಾರವಾಗಿ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ (Ricky Ponting)​​ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ಪುರುಷರ ಕ್ರಿಕೆಟ್‌ ತಂಡದ ಕೋಚ್ ಆಗಿ ರಾಹುಲ್​ ದ್ರಾವಿಡ್ (Team India Coach Rahul Dravid)​​ ಸೇರಿಕೊಂಡಿರುವುದು ನನ್ನಲ್ಲಿ ಅಚ್ಚರಿ ಮೂಡಿಸಿದೆ ಎಂದಿರುವ ಪಾಂಟಿಂಗ್​, ರಾಹುಲ್​ ದ್ರಾವಿಡ್​​ ಚಿಕ್ಕ ಕುಟುಂಬ ಬಿಟ್ಟು ಭಾರತ ತಂಡದ ಮುಖ್ಯ ಕೋಚ್​ ಸ್ಥಾನ ಪಡೆದುಕೊಂಡಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ. ಅಂಡರ್​-19 ತಂಡದ ಕೋಚ್​ ಆಗಿದ್ದ ವೇಳೆ ದ್ರಾವಿಡ್​ ತುಂಬಾ ಖುಷಿಯಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಭಾರತೀಯ ಕ್ರಿಕೆಟ್ ಮಂಡಳಿ (BCCI) ಉತ್ತಮ ವ್ಯಕ್ತಿಗೆ ಮಣೆ ಹಾಕಿದೆ ಎಂದರು.

ಇದನ್ನೂ ಓದಿ:Mushtaq Ali Trophy: ಬೆಂಗಾಲ್ ಮಣಿಸಿ ಸೆಮಿಫೈನಲ್ಸ್ ಪ್ರವೇಶಿಸಿದ ಕರ್ನಾಟಕದ ಆಟ 'ಸೂಪರ್‌'

'ನನಗೂ ಆಫರ್ ಬಂದಿತ್ತು'

ಟೀಂ ಇಂಡಿಯಾ ಪುರುಷ ತಂಡದ ಕೋಚ್​ ಆಗುವಂತೆ ನನಗೂ ದುಬೈನಲ್ಲಿ ಸಂಪರ್ಕ ಮಾಡಲಾಗಿತ್ತು ಎಂದು ರಿಕಿ ಪಾಂಟಿಂಗ್ (Former Australia skipper Ricky Ponting) ಹೇಳಿದ್ದಾರೆ. ದುಬೈನಲ್ಲಿ 14ನೇ ಆವೃತ್ತಿ ಐಪಿಎಲ್ (IPL)​ ಆಯೋಜನೆಗೊಂಡಾಗ ಬಿಸಿಸಿಐನ ಕೆಲವರು ನನ್ನನ್ನು ಸಂಪರ್ಕಿಸಿದ್ದರು. ಆದರೆ ಕೆಲವು ಕಾರಣಗಳಿಗಾಗಿ ನಾನು ಹುದ್ದೆ ನಿರಾಕರಿಸಿದೆ ಎಂದು ಹೇಳಿದ್ದಾರೆ.

ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals)​​ ತಂಡದ ಮುಖ್ಯ ಕೋಚ್​ ಆಗಿ ಸೇವೆ ಸಲ್ಲಿಸುತ್ತಿರುವ ಪಾಂಟಿಂಗ್​, ಆಸ್ಟ್ರೇಲಿಯಾದಲ್ಲಿ ಅರೆಕಾಲಿಕ ಕ್ರಿಕೆಟ್​​ ಪರಿಣಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Last Updated : Nov 18, 2021, 7:47 PM IST

ABOUT THE AUTHOR

...view details