ದುಬೈ:ಏಕದಿನ ವಿಶ್ವಕಪ್ಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಪಂದ್ಯದ ವೇಳೆ ಅಭಿಮಾನಿಗಳು ಹೊಂದುವ "ನವರಸ" ಅನುಭವವನ್ನೇ ಐಸಿಸಿ ಲೋಗೋದ ಟ್ಯಾಗ್ ಆಗಿ ಬಳಸಿ ವಿಶ್ವಕಪ್ ವಿನ್ಯಾಸ ಬಿಡುಗಡೆ ಮಾಡಿದೆ. ಭಾರತದಲ್ಲಿ ವಿಶ್ವಕಪ್ ನಡೆಯಲಿರುವ ಕಾರಣ ಎಲ್ಲರ ಕಣ್ಣುಗಳು ರೋಹಿತ್ ಬಳಗದ ಮೇಲಿದೆ. ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕೆ.ಎಲ್.ರಾಹುಲ್ಗೆ ಆರಂಭಿಕ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆ ಎಲ್ಲರದ್ದು.
ಆಸ್ಟ್ರೇಲಿಯಾದ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್, ಭಾರತದ ವಿಶ್ವಕಪ್ ತಂಡದಲ್ಲಿ ಕೆಲ ಆಟಗಾರರು ಬಹಳ ಮುಖ್ಯವಾಗುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ಐಸಿಸಿ ವಿಮರ್ಶೆಯ ಇತ್ತೀಚಿನ ಸಂಚಿಕೆಯಲ್ಲಿ ಹೇಳಿದ್ದಾರೆ. ವಿಶ್ವಕಪ್ ತಂಡದಲ್ಲಿ ಕೆ.ಎಲ್.ರಾಹುಲ್ ಮತ್ತು ಇಶಾನ್ ಕಿಶನ್ ಇಬ್ಬರಿಗೂ ತಂಡದಲ್ಲಿ ಅವಕಾಶ ಸಿಗಲಿದೆ ಎಂದಿದ್ದಾರೆ. ರಿಷಬ್ ಪಂತ್ ಕಾರು ಅಪಘಾತದಿಂದ ತಂಡದ ಭಾಗವಾಗಿರಲು ಸಾಧ್ಯವಿರದ ಕಾರಣ ಬದಲಿ ವಿಕೆಟ್ ಕೀಪರ್ ಸ್ಥಾನಕ್ಕೆ ಇವರಿಬ್ಬರು ಸೂಕ್ತ. ಕಿಶನ್ ಎಡಗೈ ಬ್ಯಾಟರ್ ಆಗಿದ್ದು ತಂಡದಲ್ಲಿ ಬೇಕಾಗುತ್ತಾರೆ ಎಂದು ಹೇಳಿದ್ದಾರೆ.
ರಾಹುಲ್ ಅವರನ್ನು ಬಿಟ್ಟು ತಂಡ ಮಾಡುತ್ತಾರೆಂದು ನಾನು ಹೇಳಲಾರೆ. ಅವರು ಖಂಡಿತವಾಗಿಯೂ ತಂಡದಲ್ಲಿ ಇರುತ್ತಾರೆ. ಹಾಗೆಯೇ ತಂಡದಲ್ಲಿ ಎಡಗೈ ಬ್ಯಾಟರ್ನ ಅಗತ್ಯತೆಯ ಹಿನ್ನೆಲೆಯಲ್ಲಿ ಇಶಾನ್ ಕಿಶನ್ ತಂಡ ಇನ್ನೊಂದು ಆಯ್ಕೆ ಆಗಿರಲಿದ್ದಾರೆ. ಎಡಗೈ ಬ್ಯಾಟರ್ಗಳಾದ ಜಡೇಜ, ಅಕ್ಷರ್ ಹೇಗೆ ತಂಡಕ್ಕೆ ಆಸರೆಯಾಗುತ್ತಾರೋ ಹಾಗೆಯೇ ಕಿಶನ್ ಪರಿಣಾಮ ಬೀರಲಿದ್ದಾರೆ" ಎನ್ನುತ್ತಾರೆ ಪಾಂಟಿಂಗ್.