ಮುಂಬೈ: ಮುಂಬರುವ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಐಸಿಸಿ ಟಿ - 20 ವಿಶ್ವಕಪ್ ಟೂರ್ನಿ ನಡೆಯಲಿದ್ದು, ಆಸ್ಟ್ರೇಲಿಯಾದಲ್ಲಿ ಈ ಮಹತ್ವದ ಸರಣಿ ಆಯೋಜನೆಗೊಂಡಿದೆ. ಈ ಟೂರ್ನಿಯಲ್ಲಿ ಫೈನಲ್ಗೆ ಯಾವ ತಂಡಗಳು ಲಗ್ಗೆ ಹಾಕಲಿವೆ ಎಂಬುದರ ಬಗ್ಗೆ ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ ಯುಎಇನಲ್ಲಿ ನಡೆದ ಟಿ - 20 ವಿಶ್ವಕಪ್ನಲ್ಲಿ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ ಎಂದು ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ. ಆರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡ ಮತ್ತೊಂದು ಅವಧಿಗೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಹೊಂದಿದ್ದು, ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಕೂಡ ಫೈನಲ್ಗೆ ಬರಲಿದೆ ಎಂದಿದ್ದಾರೆ.
ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಇದನ್ನೂ ಓದಿರಿ:ವಿಶ್ವ ದಾಖಲೆಯತ್ತ ಶಿಖರ್ ಧವನ್ ಚಿತ್ತ.. ನಾಳೆಯ ಪಂದ್ಯ ಗೆದ್ದರೆ ಸೃಷ್ಟಿಯಾಗಲಿದೆ ಹೊಸ ಇತಿಹಾಸ!
ಭಾರತ - ಆಸ್ಟ್ರೇಲಿಯಾ ತಂಡಗಳು ಫೈನಲ್ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದು, ಇದೇ ವೇಳೆ, ಇಂಗ್ಲೆಂಡ್ ತಂಡ ಸಹ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ ರನ್ಗಳಿಕೆ ಮಾಡದಿದ್ದರೆ ಅದು ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದಿರುವ ಪಾಂಟಿಂಗ್, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿ, ಪ್ರಶಸ್ತಿಗೆ ಮುತ್ತಿಕ್ಕಲಿದೆ ಎಂದು ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ಗೋಸ್ಕರ ಈಗಾಗಲೇ ಎಲ್ಲ ತಂಡಗಳು ಭರದ ಯೋಜನೆ ರೂಪಿಸುತ್ತಿದ್ದು, ಟೀಂ ಇಂಡಿಯಾ ಕೂಡ ಇದರಿಂದ ಹೊರ ಬಿದ್ದಿಲ್ಲ.