ಸೇಂಟ್ ಜಾನ್ಸ್(ಆ್ಯಂಟಿಗುವಾ):ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಟೆಸ್ಟ್ ಸರಣಿಗೆ ನೂತನ ವಿನ್ಯಾಸದ ರಿಚರ್ಡ್ಸ್-ಬಾಥಮ್ ಟ್ರೋಫಿಯನ್ನು ಸ್ವತಃ ಲೆಜೆಂಡರಿ ಕ್ರಿಕೆಟಿಗರಾದ ಸರ್ ವಿವಿಯನ್ ರಿಚರ್ಡ್ಸ್ ಮತ್ತು ಲಾರ್ಡ್ ಇಯಾನ್ ಭಾಥಮ್ ಸೋಮವಾರ ಬಿಡುಗಡೆ ಮಾಡಿದ್ದಾರೆ.
ನನ್ನ ಉತ್ತಮ ಗೆಳೆಯ ಇಯಾನ್ ಮತ್ತು ನನ್ನ ಗೌರವಾರ್ಥವಾಗಿ ನಾಮಕರಣ ಮಾಡಿರುವ ಟ್ರೋಫಿಯನ್ನು ಹೊಂದಿರುವುದು ನಿಜವಾಗಿಯೂ ನನ್ನಲ್ಲಿ ವಿಶೇಷ ಭಾವನೆ ಉಂಟುಮಾಡಿದೆ. ನಾವು ಒಟ್ಟಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ ಮತ್ತು ಮೈದಾನದ ಒಳಗೆ ಮತ್ತು ಹೊರಗೆ ಉತ್ತಮ ಸ್ನೇಹತ್ವ ನಿರ್ಮಿಸಿದ್ದೇವೆ ಎಂದು ರಿಚರ್ಡ್ಸ್ ತಿಳಿಸಿದ್ದಾರೆ.
ಮಾತು ಮುಂದುವರಿಸಿದ ಅವರು, "ನಾನು ಮೊದಲೇ ಹೇಳಿದಂತೆ, ನನ್ನ ಜೀವನದುದ್ದಕ್ಕೂ ನಾನು ಪ್ರೀತಿಸಿದ ಆಟಕ್ಕೆ ನನ್ನ ಕೊಡುಗೆಯನ್ನು ಗುರುತಿಸಿ ಇಂತಹ ಪ್ರತಿಷ್ಠಿತ ಪ್ರಶಸ್ತಿಗೆ ನನ್ನ ಹೆಸರಿಡುತ್ತಿರುವುದಕ್ಕೆ ನನಗೆ ನಿಜವಾಗಿಯೂ ಸಂತೋಷವಾಗಿದೆ. ಇದೊಂದು ಸುಂದರವಾದ ಟ್ರೋಫಿಯಾಗಿದೆ ಮತ್ತು ಈ ಆಲೋಚನೆ ಮಾಡಿದ ಮತ್ತು ಅದರ ರಚನೆಗೆ ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ರಿಚರ್ಡ್ಸ್ ಹೇಳಿದ್ದಾರೆ.