ನವದೆಹಲಿ: ಆಸ್ಟ್ರೇಲಿಯಾದ ದಂತ ಕಥೆ 'ಶೇನ್ ವಾರ್ನ್' ಅವರ ಅಕಾಲಿಕ ನಿಧನಕ್ಕೆ ಈಗ ಇಡೀ ಕ್ರಿಕೆಟ್ ಜಗತ್ತೇ ಆಘಾತಕ್ಕೆ ಒಳಗಾಗಿದೆ. ಅವರ ನಿಧನಕ್ಕೆ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಸುದ್ದಿಯು ನನ್ನಂತಹ ಲಕ್ಷಾಂತರ ಜನರನ್ನು ಆಘಾತ ಮತ್ತು ಅಪನಂಬಿಕೆಗೆ ಒಳಪಡಿಸಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಿರಿಯ ನಟ 'ಅನಿಲ್ ಕಪೂರ್' ಟ್ವೀಟ್ ಮಾಡಿದ್ದಾರೆ.
'ಶೇನ್ ವಾರ್ನ್ ಅವರ ಅಕಾಲಿಕ ಮರಣದ ಸುದ್ದಿ ತಿಳಿದು ಮಾತು ಬಾರದಂತೆ ಆಗಿದೆ. ಓಂ ಶಾಂತಿ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಇದು ಹೇಗೆ ನಿಜ?. ಈ ವಿಚಾರ ಸಂಪೂರ್ಣವಾಗಿ ಆಘಾತಕಾರಿ ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಟ ಮನೋಜ್ ಬಾಜಪೇಯಿ ಕೂಡ ಟ್ವೀಟ್ ಮಾಡಿದ್ದಾರೆ.
ಶ್ರೇಷ್ಠ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರ ಅನಿರೀಕ್ಷಿತ ನಿಧನದ ಬಗ್ಗೆ ತಿಳಿದು ತೀವ್ರ ಆಘಾತ ಮತ್ತು ದುಃಖವಾಗಿದೆ ಎಂದು ಹಿರಿಯ ಸ್ಟಾರ್ ಅನುಪಮ್ ಖೇರ್ ಹೇಳಿದ್ದಾರೆ. ಲಂಡನ್ ಹೋಟೆಲ್ ಲಾಬಿಯಲ್ಲಿ ಅವರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು. ನಾವು ನಿಮ್ಮ ತೇಜಸ್ಸನ್ನು ಕಳೆದುಕೊಂಡಿದ್ದೇವೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ