ಕರ್ನಾಟಕ

karnataka

ETV Bharat / sports

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ ಕಟ್ಟಿಟ್ಟ ಬುತ್ತಿ ಎನ್ನುತ್ತಿವೆ ಈ ಹಿಂದಿನ ದಾಖಲೆಗಳು!

ದಕ್ಷಿಣ ಆಫ್ರಿಕಾ ತನ್ನ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 2 ಬಾರಿ ಮಾತ್ರ 300ಕ್ಕಿಂತ ಹೆಚ್ಚಿನ ಗುರಿಯನ್ನು ಬೆನ್ನಟ್ಟಿ ಜಯ ಸಾಧಿಸಿದೆ. 2008ರಲ್ಲಿ ಪರ್ತ್​ ಟೆಸ್ಟ್​ನಲ್ಲಿ 414 ಮತ್ತು 2002ರಲ್ಲಿ ಡರ್ಬನ್​ ಟೆಸ್ಟ್​​ನಲ್ಲಿ 340 ರನ್​ಗಳನ್ನು ಹಿಂಬಾಲಿಸಿ ಗೆದ್ದಿದೆ. ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 211ರನ್‌ಗಳನ್ನು ಮಾತ್ರ ಚೇಸ್​ ಮಾಡಿದ ದಾಖಲೆ ಹೊಂದಿದೆ..

india vs SA chasing records
ದಕ್ಷಿಣ ಆಫ್ರಿಕಾ ಭಾರತ ಟೆಸ್ಟ್​ ದಾಖಲೆ

By

Published : Dec 29, 2021, 7:48 PM IST

ಸೆಂಚುರಿಯನ್ :ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ 2ನೇ ಇನ್ನಿಂಗ್ಸ್​​ನಲ್ಲಿ ಭಾರತ 174 ರನ್​ಗಳಿಗೆ ಆಲೌಟ್ ಆಗುವ ಮೂಲಕ ಹರಿಣಗಳಿಗೆ 305 ರನ್​ಗಳ ಬೃಹತ್ ಗುರಿ ನೀಡಿದೆ. ಭಾರತ ಕಡಿಮೆ ಮೊತ್ತಕ್ಕೆ ಆಲೌಟ್ ಆದರೂ ನೀಡಿರುವ ಗುರಿಯ ಆಧಾರದ ಮೇಲೆ ಈ ಪಂದ್ಯದಲ್ಲಿ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಹಿಂದಿನ ದಾಖಲೆಗಳನ್ನು ಗಮನಿಸಿದಾಗ ಈ ಪಿಚ್‌​ನಲ್ಲಿ 4 ಅಥವಾ 5ನೇ ದಿನದಂದು ಹೆಚ್ಚು ಬೌನ್ಸ್ ಮತ್ತು ಚಲನೆಯಲ್ಲಿ ಸಾಕಷ್ಟು​ ಬದಲಾಗುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಭಾರತದಂತಹ ವಿಶ್ವ ಶ್ರೇಷ್ಠ ವೇಗಿಗಳ ಎದುರು ಈ ದಾಖಲೆ ಬೆನ್ನಟ್ಟುವುದು ಅನಾನುಭವಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅಸಾಧ್ಯದ ಕೆಲಸವಾಗಿದೆ.

ಸೆಂಚುರಿಯನ್​ನಲ್ಲಿ ಯಶಸ್ವಿ ಚೇಸ್​ 251 ರನ್​!

ಸೆಂಚುರಿಯನ್​ನ ಸೂಪರ್​ಸ್ಪೋರ್ಟ್ಸ್​ ಪಾರ್ಕ್​​ನಲ್ಲಿ ಯಶಸ್ವಿಯಾಗಿ ಚೇಸ್​ ಮಾಡಿ ಗೆದ್ದಿರುವ ಮೊತ್ತ 251 ರನ್​. 2000ರ ಇಸ್ವಿಯ ಜನವರಿಯಲ್ಲಿ ಇಂಗ್ಲೆಂಡ್​ ವಿಚಿತ್ರ ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ಎರಡೂ ತಂಡಗಳು ಯಾವುದೇ ರನ್​ಗಳಿಸದೆ ತಮ್ಮ ತಲಾ ಒಂದೊಂದು ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿಕೊಂಡು ಕೇವಲ ಒಂದೇ ಇನ್ನಿಂಗ್ಸ್ ಆಡಿದ್ದವು.

4ನೇ ಇನ್ನಿಂಗ್ಸ್​ನಲ್ಲಿ ಗರಿಷ್ಠ ಮೊತ್ತ ಕೂಡ ಇಂಗ್ಲೆಂಡ್​ ಹೆಸರಿನಲ್ಲಿಯೇ ಇದೆ. 2019ರಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 376 ರನ್​ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್​ ತಂಡ 268 ರನ್​ಗಳಿಸಿತ್ತು. ಆದರೆ, ಈ ಪಂದ್ಯವನ್ನು 107 ರನ್​ಗಳಿಂದ ಸೋಲುಂಡಿತ್ತು.

ಭಾರತದ ವಿರುದ್ಧ 300ಕ್ಕೂ ಹೆಚ್ಚು ರನ್​ ಚೇಸ್​ ಅಸಾಧ್ಯ

ಭಾರತ ತನ್ನ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಒಮ್ಮೆ ಮಾತ್ರ 300ಕ್ಕೂ ಹೆಚ್ಚು ರನ್​ಗಳ ಟಾರ್ಗೆಟ್ ನೀಡಿ ಸೋಲು ಕಂಡಿದೆ. ಅದು 44 ವರ್ಷಗಳ ಹಿಂದೆ. 1977ರಲ್ಲಿ ಪರ್ತ್​ನಲ್ಲಿ 342 ರನ್​ಗಳ ಗುರಿಯನ್ನು ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿ ಬೆನ್ನಟ್ಟಿದ್ದು ಬಿಟ್ಟರೆ ಯಾವುದೇ ತಂಡ ಭಾರತವನ್ನು 300ಕ್ಕೂ ಹೆಚ್ಚು ರನ್​ ಚೇಸ್​ ಮಾಡಿ ಗೆದ್ದಿರುವ ಇತಿಹಾಸವಿಲ್ಲ. 1987ರ ನಂತರ ಭಾರತದ ವಿರುದ್ಧ ಯಾವುದೇ ತಂಡ 250ಕ್ಕಿಂತ ಹೆಚ್ಚಿನ ಗುರಿಯನ್ನು ಚೇಸ್​ ಮಾಡಲು ಸಾಧ್ಯವಾಗಿಲ್ಲ. 1987ರಲ್ಲಿ ಕೊನೆಯ ಬಾರಿ ವೆಸ್ಟ್​ ಇಂಡೀಸ್​ ಚೇಸ್ ಮಾಡಿ ಗೆದ್ದಿತ್ತು.

300ಕ್ಕೂ ಹೆಚ್ಚು ರನ್‌ ಗುರಿ 2 ಬಾರಿ ಮಾತ್ರ ಚೇಸ್​ ಮಾಡಿರುವ ದ.ಆಫ್ರಿಕಾ

ದಕ್ಷಿಣ ಆಫ್ರಿಕಾ ತನ್ನ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 2 ಬಾರಿ ಮಾತ್ರ 300ಕ್ಕಿಂತ ಹೆಚ್ಚಿನ ಗುರಿಯನ್ನು ಬೆನ್ನಟ್ಟಿ ಜಯ ಸಾಧಿಸಿದೆ. 2008ರಲ್ಲಿ ಪರ್ತ್​ ಟೆಸ್ಟ್​ನಲ್ಲಿ 414 ಮತ್ತು 2002ರಲ್ಲಿ ಡರ್ಬನ್​ ಟೆಸ್ಟ್​​ನಲ್ಲಿ 340 ರನ್​ಗಳನ್ನು ಹಿಂಬಾಲಿಸಿ ಗೆದ್ದಿದೆ. ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 211ರನ್‌ಗಳನ್ನು ಮಾತ್ರ ಚೇಸ್​ ಮಾಡಿದ ದಾಖಲೆ ಹೊಂದಿದೆ.

ಈ ಎಲ್ಲಾ ದಾಖಲೆಗಳನ್ನು ಗಮನಿಸಿದರೆ ಭಾರತ ನೀಡಿರುವ 305 ರನ್​ಗಳ ಗುರಿಯನ್ನು ಪ್ರಸ್ತುತ ಇರುವ ಅನಾನುಭವಿ ತಂಡ ಚೇಸ್​ ಮಾಡುವುದು ಅಸಾಧ್ಯ. ಇನ್ನೂ 130 ಓವರ್​ಗಳು ಬಾಕಿ ಉಳಿದಿರುವುದರಿಂದ ಕೊಹ್ಲಿ ಪಡೆ ಗೆಲ್ಲುವ ಅವಕಾಶ ಹೆಚ್ಚಿದೆ.

ಇದನ್ನೂ ಓದಿ:ಬ್ಯಾಟಿಂಗ್ ವೈಫಲ್ಯದಿಂದ ಭಾರತ 174ಕ್ಕೆ ಆಲೌಟ್​: ದಕ್ಷಿಣ ಆಫ್ರಿಕಾಗೆ 305 ರನ್​​ಗಳ ಗುರಿ ನೀಡಿದ ಕೊಹ್ಲಿ ಪಡೆ

ABOUT THE AUTHOR

...view details