ಚೆನ್ನೈ: ಹ್ಯಾಟ್ರಿಕ್ ಗೆಲುವಿನ ಮೇಲೇ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯ ಐಪಿಎಲ್ನ 10ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಮೊದಲೆರಡು ಪಂದ್ಯಗಳಲ್ಲಿ ಬಲಿಷ್ಠ ಮುಂಬೈ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಕೊಹ್ಲಿ ಪಡೆ ಟೂರ್ನಿಯಲ್ಲಿ ಏಕೈಕ ಅಜೇಯ ತಂಡವಾಗಿ ಉಳಿದುಕೊಂಡಿದೆ. ಇಂದಿನ ಪಂದ್ಯದಲ್ಲಿ ಆಲ್ರೌಂಡರ್ ಡೇನಿಯಲ್ ಕ್ರಿಸ್ಚಿಯನ್ ಬದಲಿಗೆ ಯುವ ಬ್ಯಾಟ್ಸ್ಮನ್ ರಜತ್ ಪಾಟಿದಾರ್ರನ್ನು ತಂಡಕ್ಕೆ ಸೇರಿಸಿಕೊಂಡಿರುವ ಆರ್ಸಿಬಿ ಕೇವಲ 3 ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದಿದೆ.
ಇತ್ತ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ 10 ರನ್ಗಳ ರೋಚಕ ಜಯ ಸಾಧಿಸಿದ್ದ ಕೋಲ್ಕತ್ತಾ ತಂಡ, ಮುಂಬೈ ವಿರುದ್ಧ ಕಡಿಮೆ ಮೊತ್ತದ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿ 10 ರನ್ಗಳ ಸೋಲು ಕಂಡು ನಿರಾಶೆಯನುಭವಿಸಿದೆ. ಇದೀಗ ಆರ್ಸಿಬಿ ವಿರುದ್ಧ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದ್ದು, ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿದಿದೆ.