ಕರ್ನಾಟಕ

karnataka

ETV Bharat / sports

IPL 2022: ವಿರಾಟ್​, ಮ್ಯಾಕ್ಸಿ ಸೇರಿ ಈ ಎಲ್ಲ ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲಿದೆ RCB ? - ಗ್ಲೇನ್​ ಮ್ಯಾಕ್ಸ್​ವೆಲ್​

ಐಪಿಎಲ್​ 2022ರ ಮೆಗಾ ಹರಾಜಿಗೂ ಮುನ್ನ ನವೆಂಬರ್ 30ರೊಳಗೆ ಎಲ್ಲ 8 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಅಂತಿಮ ಪಟ್ಟಿ ಸಲ್ಲಿಸಬೇಕಿದೆ. ಬಿಸಿಸಿಐ ಈ ಹಿಂದೆಯೇ ಐಪಿಎಲ್ ಫ್ರಾಂಚೈಸಿಗಳಿಗೆ ರಿಟೇನ್​ ನಿಯಮ ಬಿಡುಗಡೆ ಮಾಡಿದೆ.

royal challengers bangalore
ರಾಯಲ್ ಚಾಲೆಂಜರ್ಸ್ ಬೆಂಗಳೂರು

By

Published : Nov 26, 2021, 10:08 AM IST

ಹೈದರಾಬಾದ್​:ಇಂಡಿಯನ್​​ ಪ್ರೀಮಿಯರ್ ಲೀಗ್​ನ 2022ನೇ ಸಾಲಿನ ಆವೃತ್ತಿಗೋಸ್ಕರ ಎಲ್ಲ ಸಿದ್ಧತೆ ಆರಂಭಗೊಂಡಿದ್ದು, ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. 8 ಫ್ರಾಂಚೈಸಿಗಳಿಗೆ ಕೇವಲ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಹರಾಜಿಗೂ ಮುನ್ನ ನವೆಂಬರ್ 30ರೊಳಗೆ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಅಂತಿಮ ಪಟ್ಟಿ ಸಲ್ಲಿಸಬೇಕಿದೆ. ಬಿಸಿಸಿಐ ಈ ಹಿಂದೆಯೇ ಐಪಿಎಲ್ ಫ್ರಾಂಚೈಸಿಗಳಿಗೆ ರಿಟೇನ್​ ನಿಯಮ ಬಿಡುಗಡೆ ಮಾಡಿತ್ತು. ಫ್ರಾಂಚೈಸಿಗಳು 4 ಆಟಗಾರರಲ್ಲಿ ಗರಿಷ್ಠ 3 ದೇಶಿ ಮತ್ತು ಒಬ್ಬ ವಿದೇಶಿ ಆಟಗಾರನ್ನು ಅಥವಾ ಗರಿಷ್ಠ ತಲಾ 2 ದೇಶಿ ಮತ್ತು ವಿದೇಶಿ ಆಟಗಾರರ ಸಂಯೋಜನೆಯಲ್ಲಿ ರಿಟೇನ್ ಮಾಡಿಕೊಳ್ಳಲು ಮಾತ್ರ ಅವಕಾಶವಿದೆ. ಇನ್ನು 2ಕ್ಕಿಂತ ಹೆಚ್ಚು ಅನ್​ಕ್ಯಾಪಡ್​ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶವಿಲ್ಲ.

ಪ್ರತಿ ಫ್ರಾಂಚೈಸಿಗಳಿಗೆ ತಲಾ 90 ಕೋಟಿ ರೂ ನೀಡಲಾಗಿದೆ. ಇದರಲ್ಲಿ 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಯಸುವ ಫ್ರಾಂಚೈಸಿಗಳು 42 ಕೋಟಿ ರೂಗಳನ್ನು ಬಳಸಿಕೊಳ್ಳಬಹುದಾಗಿದೆ.

ಕೊಹ್ಲಿ, ಮ್ಯಾಕ್ಸ್‌ವೆಲ್ ರಿಟೇನ್​:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಎಲ್ಲ ಮಾದರಿಯ ಕ್ರಿಕೆಟ್​ಗೂ ನಿವೃತ್ತಿ ಘೋಷಿಸಿರುವ ಕಾರಣ ಅವರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಮ್ಯಾಕ್ಸಿ ಉಳಿದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಒಟ್ಟಾರೆ, ಆರ್​ಸಿಬಿಯು ನಾಲ್ಕು ಆಟಗಾರರ ಕೋಟಾದ ಭಾಗವಾಗಿ ಯುಜ್ವೇಂದ್ರ ಚಹಾಲ್ ಅವರನ್ನೂ ಸಹ ಉಳಿಸಿಕೊಳ್ಳಬಹುದು. ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಅವರು ಆರ್‌ಸಿಬಿ ಉಳಿಸಿಕೊಳ್ಳಬಹುದಾದ ಆಟಗಾರರಲ್ಲಿ ಕೊಹ್ಲಿ ಮತ್ತು ಚಹಲ್‌ ಸೇರಿದಂತೆ ಮೂರನೇ ಆಟಗಾರನಾಗಿ ದೇವದತ್ ಪಡಿಕ್ಕಲ್ ಅವರ ಹೆಸರನ್ನು ಹೇಳಿದ್ದಾರೆ. ಅಲ್ಲದೆ, ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಗಳಾಗಿ ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಹೆಸರಿಸಿದ್ದಾರೆ. ಆಶ್ಚರ್ಯಕರ ಎಂಬಂತೆ ಮ್ಯಾಕ್ಸ್‌ವೆಲ್ ಅವರನ್ನು ಚೋಪ್ರಾ ತಮ್ಮ ಆಯ್ಕೆಗಳಿಂದ ಕೈಬಿಟ್ಟಿದ್ದಾರೆ.

ಹಲವು ತಂಡಗಳಿಂದ ಈಗಾಗಲೇ ನಿರ್ಧಾರ?

ಈ ಮಧ್ಯೆ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​​ ಸೇರಿದಂತೆ ಹಲವಾರು ಇತರ ತಂಡಗಳು 2022ರ ಐಪಿಎಲ್​ಗಾಗಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಈಗಾಗಲೇ ನಿರ್ಧರಿಸಿವೆ ಎಂದು ವರದಿಯಾಗಿದೆ. ನಾಯಕ ರೋಹಿತ್ ಶರ್ಮಾ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ಉತ್ಸುಕವಾಗಿದೆ.

ಅಲ್ಲದೆ, ಸ್ಟಾರ್ ವೆಸ್ಟ್ ಇಂಡೀಸ್ ಆಲ್​​ರೌಂಡರ್ ಕೀರನ್ ಪೊಲಾರ್ಡ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ವಿಕೆಟ್​ ಕೀಪರ್ ಬ್ಯಾಟರ್​​ ಇಶಾನ್ ಕಿಶನ್ ಅವರನ್ನೂ ಕೂಡ ಉಳಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಬಿಟ್ಟು ಬಳಿಕ ಹರಾಜಿನಲ್ಲಿ ಮರು ಖರೀದಿಸಲಿದೆ ಎನ್ನಲಾಗುತ್ತಿದೆ.

ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಇನ್ನೂ ಮೂರು ವರ್ಷಗಳ ಕಾಲ ತಮ್ಮಲ್ಲಿಯೇ ಉಳಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಮೂಲಕ ಐಪಿಎಲ್​ನಿಂದ ಅವರ ನಿವೃತ್ತಿಯ ವದಂತಿಗೆ ತೆರೆ ಬಿದ್ದಿದೆ. ಜೊತೆಗೆ ಆಲ್​ರೌಂಡರ್​ ರವೀಂದ್ರ ಜಡೇಜಾ ಮತ್ತು ಉದಯೋನ್ಮುಖ ತಾರೆ ರುತುರಾಜ್ ಗಾಯಕ್ವಾಡ್ ಅವರನ್ನೂ ಸಿಎಸ್‌ಕೆ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಮೊಯಿನ್ ಅಲಿ ಅಥವಾ ಸ್ಯಾಮ್ ಕರನ್​ರಲ್ಲಿ ಒಬ್ಬರು ರಿಟೇನ್​ ಆಗಲಿದ್ದಾರೆ.

ಇದನ್ನೂ ಓದಿ:8 ಹಳೆಯ ತಂಡಗಳಿಗೆ 4, ಹೊಸ ತಂಡಗಳಿಗೆ 3 ಆಟಗಾರರ ರೀಟೈನ್​ಗೆ ಅವಕಾಶ : ಸ್ಯಾಲರಿ ಪ್ಯಾಕೇಜ್ ಹೀಗಿರಲಿದೆ

ಇವರೆಲ್ಲ ಉಳಿದುಕೊಳ್ಳಬಹುದು

ಕೋಲ್ಕತ್ತಾ ನೈಟ್ ರೈಡರ್ಸ್​ಗೆ ವೆಸ್ಟ್ ಇಂಡೀಸ್ ತಾರೆಗಳಾದ ಆಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಅವರು ಉಳಿಸಿಕೊಳ್ಳುವ ಆಯ್ಕೆಗಳಾಗಿವೆ. ಉಳಿದುಕೊಳ್ಳಬಹುದಾದ ಇತರ ಆಟಗಾರರೆಂದರೆ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್ ಮತ್ತು ಶುಭಮನ್ ಗಿಲ್. ಐಪಿಎಲ್ 2021ರ ಯುಎಇ ಚರಣದಲ್ಲಿ ತಂಡವು ಫೈನಲ್‌ಗೆ ತಲುಪುವಲ್ಲಿ ಗಿಲ್ ಮತ್ತು ಅಯ್ಯರ್ ಅತ್ಯುತ್ತಮ ಕೊಡುಗೆ ನೀಡಿದ್ದರು.

2022ರ ಐಪಿಎಲ್​ಗೆ 2 ಹೊಸ ತಂಡಗಳಾದ ಲಖನೌ ಮತ್ತು ಅಹಮದಾಬಾದ್ ಸೇರ್ಪಡೆಯಾಗಿವೆ. 4 ಪಂದ್ಯಗಳನ್ನು ಹೊಂದಿರುತ್ತದೆ. ಇದರಲ್ಲಿ ಪ್ರತಿ ತಂಡಕ್ಕೆ ಏಳು ತವರು ಮತ್ತು ಏಳು ಹೊರಗಡೆ ಪಂದ್ಯ ಆಡಲಿವೆ.

ಇದನ್ನೂ ಓದಿ:ಆ್ಯಶಸ್ ಟೆಸ್ಟ್​​ ಸರಣಿಗೂ ಮುನ್ನ ಆಸೀಸ್​ಗೆ ಮತ್ತೊಂದು ಶಾಕ್​.. ಕ್ರಿಕೆಟ್​ನಿಂದ ದೂರ ಸರಿದ ಟಿಮ್ ಪೇನ್​​

ABOUT THE AUTHOR

...view details