ಕರ್ನಾಟಕ

karnataka

ETV Bharat / sports

ಹರ್ಷಲ್ ಪಟೇಲ್ ಕಮ್​ಬ್ಯಾಕ್​​ ಬಲ.. ಡೆಲ್ಲಿ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿ ಆರ್​ಸಿಬಿ..

ಪ್ರಸ್ತುತ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಆರ್​ಸಿಬಿ 3ರಲ್ಲಿ ಜಯ ಮತ್ತು 2ರಲ್ಲಿ ಸೋಲುಂಡಿದೆ. ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ಒಂದೆರಡು ಪಂದ್ಯಗಳಲ್ಲಿ ವಿದೇಶಿ ಆಟಗಾರರ ಅಲಭ್ಯತೆಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಆದರೆ, ವಾರ್ನರ್ ತಂಡಕ್ಕೆ ಬಂದ ನಂತರ ಅವರ ಆರಂಭಿಕ ಬ್ಯಾಟಿಂಗ್ ಬಲ ದುಪ್ಪಟ್ಟಾಗಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ 200+ ರನ್​ ಗಳಿಸಿ ಗೆಲುವು ಸಾಧಿಸಿದೆ..

RCB need Harshal boost to get campaign back on track against DC
ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು

By

Published : Apr 16, 2022, 3:40 PM IST

ಮುಂಬೈ :ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಳಪೆ ಬೌಲಿಂಗ್ ಪ್ರದರ್ಶನ ತೋರಿ ಸೋಲು ಕಂಡಿರುವ ಆರ್​ಸಿಬಿ ಶನಿವಾರ ಡೆಲ್ಲಿ ವಿರುದ್ಧ ಕಣಕ್ಕಿಳಿಯುತ್ತಿದೆ. ಕಳೆದ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದ ಹರ್ಷಲ್ ಪಟೇಲ್ ಕಮ್​ಬ್ಯಾಕ್​ ಮಾಡಿರುವುದರಿಂದ ಬೌಲಿಂಗ್​ ವಿಭಾಗಕ್ಕೆ ಬಲ ಬಂದಿದೆ.

ಪ್ರಸ್ತುತ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಆರ್​ಸಿಬಿ 3ರಲ್ಲಿ ಜಯ ಮತ್ತು 2ರಲ್ಲಿ ಸೋಲುಂಡಿದೆ. ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ಒಂದೆರಡು ಪಂದ್ಯಗಳಲ್ಲಿ ವಿದೇಶಿ ಆಟಗಾರರ ಅಲಭ್ಯತೆಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಆದರೆ, ವಾರ್ನರ್ ತಂಡಕ್ಕೆ ಬಂದ ನಂತರ ಅವರ ಆರಂಭಿಕ ಬ್ಯಾಟಿಂಗ್ ಬಲ ದುಪ್ಪಟ್ಟಾಗಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ 200+ ರನ್​ ಗಳಿಸಿ ಗೆಲುವು ಸಾಧಿಸಿದೆ.

ಗಾಯದ ಕಾರಣ ಡೆಲ್ಲಿ ತಂಡ ಸ್ಟಾರ್ ಆಲ್​ರೌಂಡರ್ ಮಿಚೆಲ್ ಮಾರ್ಷ್​ ಸೇವೆ ಕಳೆದುಕೊಂಡಿತ್ತು. ಪಾಕಿಸ್ತಾನ ಪ್ರವಾಸದಲ್ಲಿ ಗಾಯಗೊಂಡಿರುವ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಡೆಲ್ಲಿ ಆರಂಭಿಕರಾದ ಪೃಥ್ವಿ ಶಾ ಮತ್ತು ವಾರ್ನರ್​ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಮಾರ್ಷ್​ ಆಗಮನ ಖಚಿತವಾದರೆ ನಾಯಕ ರಿಷಭ್ ಪಂತ್ ಮಧ್ಯಮ ಕ್ರಮಾಂಕಕ್ಕೆ ಮರಳಲಿದ್ದಾರೆ.

ಇತ್ತ ಆರ್​ಸಿಬಿ ಕೂಡ ಕಳೆದ ಪಂದ್ಯದಲ್ಲಿ ಹರ್ಷಲ್ ಪಟೇಲ್​ ಸೇವೆಯನ್ನು ತುಂಬಾ ಮಿಸ್ ಮಾಡಿಕೊಂಡಿತ್ತು. ಅವರಿಲ್ಲದೆ ಡೆತ್​ ಓವರ್​ಗಳಲ್ಲಿ ಸಾಕಷ್ಟು ರನ್​ ಬಿಟ್ಟುಕೊಟ್ಟಿತ್ತು. ಹಸರಂಗ ಕೆಲವು ಓವರ್​ ಮಾಡಿದರಾದರೂ ದುಬಾರಿಯಾಗಿದ್ದರು. ಇದೀಗ ಹರ್ಷಲ್ ಕಮ್​ಬ್ಯಾಕ್​ ಬೌಲಿಂಗ್ ವಿಭಾಗಕ್ಕೆ ಬಲ ತರಲಿದೆ. ಆದರೆ, ಆರ್​ಸಿಬಿ ದೊಡ್ಡ ಸಮಸ್ಯೆ ಎಂದರೆ ವಿರಾಟ್​ ಕೊಹ್ಲಿ ಮತ್ತು ಪ್ಲೆಸಿಸ್​ ಫಾರ್ಮ್​. ಈ ಇಬ್ಬರು ಲೆಜೆಂಡರಿ ಆಟಗಾರರು ಈ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಬೇಕಿದೆ.

ತಂಡದ ಸಕಾರಾತ್ಮಕ ಅಂಶವೆಂದರೆ ಆರ್ಸಿಬಿ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಶಹಬಾಜ್, ಪ್ರಭು ದೇಸಾಯಿ ಮತ್ತು ದಿನೇಶ್ ಕಾರ್ತಿಕ್​ ಸಿಎಸ್​ಕೆ ವಿರುದ್ಧ ಅದ್ಭುತ ಬ್ಯಾಟ್ ಬೀಸಿದ್ದರು. ಬೆಂಗಳೂರು ತಂಡ ಅದೇ ಪ್ರದರ್ಶನವನ್ನು ಈ ಪಂದ್ಯದಲ್ಲೂ ನಿರೀಕ್ಷಿಸುತ್ತಿದೆ.

ಮುಖಾಮುಖಿ : ಎರಡೂ ತಂಡಗಳೂ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್​ಸಿಬಿ 16-10ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಸಂಭಾವ್ಯ XI : ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಷಬ್ ಪಂತ್ (ನಾಯಕ/ವಿಕೀ), ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್

ಸಂಭಾವ್ಯ XI : ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್

ಇದನ್ನೂ ಓದಿ:ತ್ರಿಪಾಠಿ, ಮಾರ್ಕ್​ರಮ್​ ಆಟಕ್ಕೆ ಒಲಿದ ಜಯ.. ಕೆಕೆಆರ್​ ವಿರುದ್ಧ ಸನ್​ರೈಸರ್ಸ್​ಗೆ 7 ವಿಕೆಟ್​ ಗೆಲುವು

ABOUT THE AUTHOR

...view details