ಕರ್ನಾಟಕ

karnataka

ETV Bharat / sports

IPL 2024: ಜೋಶ್ ಸೇರಿ 11 ಆಟಗಾರರ ಕೈಬಿಟ್ಟ ಆರ್​ಸಿಬಿ; ಹೀಗಿದೆ ಪ್ಲೇಯರ್ಸ್ ಪಟ್ಟಿ

IPL 2024 - RCB Full List of Players: ಮುಂದಿನ ವರ್ಷದ ಐಪಿಎಲ್ ಟೂರ್ನಿಗೂ ಮುನ್ನ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ, ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಸೇರಿ 11 ಆಟಗಾರರನ್ನು ಆರ್​ಸಿಬಿ ಕೈಬಿಟ್ಟಿದೆ.

RCB full list of players retained, released and traded ahead of IPL 2024 auction
IPL 2024: ಜೋಶ್ ಸೇರಿ ಸ್ಟಾರ್​ ಆಟಗಾರರ ಕೈಬಿಟ್ಟ ಆರ್​ಸಿಬಿ: ಉಳಿದ, ಬಿಡುಗಡೆಯಾದ ಪ್ಲೇಯರ್ಸ್​ ಪಟ್ಟಿ ಇಲ್ಲಿದೆ

By ETV Bharat Karnataka Team

Published : Nov 26, 2023, 7:27 PM IST

Updated : Nov 26, 2023, 9:46 PM IST

ಬೆಂಗಳೂರು:ಮುಂಬರುವ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್)​ ಟೂರ್ನಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ಕೆಲ ಸ್ಟಾರ್​ ಆಟಗಾರರನ್ನು ಕೈಬಿಟ್ಟಿದೆ. ಭಾನುವಾರ ಸಂಜೆ ಆರ್​ಸಿಬಿ ತನ್ನ ಕೈಬಿಟ್ಟ ಆಟಗಾರರು ಹಾಗೂ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಹರ್ಷಲ್‌ ಪಟೇಲ್‌, ವನಿಂದು ಹಸರಂಗ, ಡೇವಿಡ್ ವಿಲ್ಲಿ ಸೇರಿದಂತೆ ಬರೋಬ್ಬರಿ 11 ಆಟಗಾರರನ್ನು ಬೆಂಗಳೂರು ತಂಡ ಕೈಬಿಟ್ಟಿದೆ.

ಮುಂದಿನ ವರ್ಷದ ಐಪಿಎಲ್ ಟೂರ್ನಿಗೂ ಮುನ್ನ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ, ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಮತ್ತು ಭಾರತೀಯ ವೇಗಿ ಹರ್ಷಲ್ ಪಟೇಲ್​ ಅವರನ್ನು ಆರ್‌ಸಿಬಿ ಬಿಡುಗಡೆ ಮಾಡಿದೆ. ಅಲ್ಲದೇ, ನ್ಯೂಜಿಲೆಂಡ್ ಆಟಗಾರರಾದ ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ದಕ್ಷಿಣ ಆಫ್ರಿಕಾದ ಆಲ್​ ರೌಂಡರ್ ವೇಯ್ನ್ ಪಾರ್ನೆಲ್, ಇಂಗ್ಲೆಂಡ್‌ನ ಡೇವಿಡ್ ವಿಲ್ಲಿ ಮತ್ತು ಭಾರತೀಯ ಆಟಗಾರರಾದ ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್ ಮತ್ತು ಕೇದಾರ್ ಜಾಧವ್ ಅವರನ್ನೂ ಬೆಂಗಳೂರು ಕೈಬಿಟ್ಟಿದೆ.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಉಳಿದ ಪೃಥ್ವಿ ಶಾ, ಶಾರ್ದೂಲ್ ಕೈಬಿಟ್ಟ ಕೆಕೆಆರ್, ರೂಟ್ ಐಪಿಎಲ್‌ನಿಂದ ಹೊರಕ್ಕೆ

ಇದೇ ವೇಳೆ, ಆರ್​ಸಿಬಿ ತಂಡವು ತಮ್ಮ ಆಲ್‌ರೌಂಡರ್ ಶಹಬಾಜ್ ಅಹ್ಮದ್ ಅವರ ಬದಲಿಗೆ ಸನ್‌ರೈಸಸ್​ ಹೈದರಾಬಾದ್‌ ತಂಡದೊಂದಿಗೆ ಆಲ್‌ರೌಂಡರ್ ಮಯಾಂಕ್ ದಾಗರ್‌ ಅವರನ್ನು ವಿನಿಮಯ ಮಾಡಿಕೊಂಡಿದೆ. ಈ ಕುರಿತು ಆರ್​ಸಿಬಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, ತನ್ನ ಬಜೆಟ್​ನಲ್ಲಿ 40.75 ರೂ. ಕೋಟಿ ಬಾಕಿ ಇದ್ದು, ನಾಲ್ವರು ಸಾಗರೋತ್ತರ ಆಟಗಾರರು ಸೇರಿ ಗರಿಷ್ಠ ಏಳು ಆಟಗಾರರನ್ನು ಭರ್ತಿ ಮಾಡಬಹುದು ಎಂದು ತಿಳಿಸಿದೆ. ಕಳೆದ ಋತುವಿನಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದ ಆರ್‌ಸಿಬಿ ತಂಡ, ಏಳು ಪಂದ್ಯ ಗೆದ್ದು, ಏಳು ಪಂದ್ಯ ಸೋತು ಆರನೇ ಸ್ಥಾನ ಪಡೆದಿತ್ತು.

ಉಳಿಸಿಕೊಂಡ ಆಟಗಾರರು: ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ವೈಶಾಕ್ ವಿಜಯ್ ಕುಮಾರ್.

ಬಿಡುಗಡೆಯಾದ ಆಟಗಾರರು:ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್

ಇದನ್ನೂ ಓದಿ:ಹೊಸ ಕೋಚ್​ ಆಯ್ಕೆಗೆ ಬಿಸಿಸಿಐ ಒಲವು: ವಿ.ವಿ.ಎಸ್.ಲಕ್ಷ್ಮಣ್​ಗೆ ಭಾರತ ಕ್ರಿಕೆಟ್​ ತಂಡದ ಚುಕ್ಕಾಣಿ?

Last Updated : Nov 26, 2023, 9:46 PM IST

ABOUT THE AUTHOR

...view details