ಕರ್ನಾಟಕ

karnataka

ETV Bharat / sports

ಬ್ಯಾಟ್ಸ್​ಮನ್​ಗಳು ಪರದಾಡೋ ಪಿಚ್​ನಲ್ಲಿ ಪ್ರಜ್ವಲಿಸಿದ ಎಬಿಡಿ, ಮ್ಯಾಕ್ಸ್​ವೆಲ್ - ಆರ್‌ಸಿಬಿ ಸ್ಕ್ವಾಡ್ ಟುಡೇ

ಚೆಪಾಕ್​ನಲ್ಲಿ ನಡೆದಿದ್ದ 2021ರ ಆವೃತ್ತಿಯ ಹಿಂದಿನ ಪಂದ್ಯಗಳಲ್ಲಿ ಮುಂಬೈ 159, 152, 150, ಕೋಲ್ಕತ್ತಾ 187 ಮತ್ತು ಆರ್​ಸಿಬಿ 149 ರನ್​ಗಳಿಸಿತ್ತು.

ವಿಲಿಯರ್ಸ್- ಮ್ಯಾಕ್ಸ್​ವೆಲ್
ವಿಲಿಯರ್ಸ್- ಮ್ಯಾಕ್ಸ್​ವೆಲ್

By

Published : Apr 18, 2021, 6:50 PM IST

ಚೆನ್ನೈ:ಕಳೆದ 5 ಪಂದ್ಯಗಳಲ್ಲಿ ಬ್ಯಾಟ್ಸ್​ಮನ್​ಗಳು ರನ್​ಗಳಿಸಲು ಪರದಾಡುತ್ತಿದ್ದ ಚೆಪಾಕ್​ನಲ್ಲಿ ಇಂದು ಕೆಕೆಆರ್​ ವಿರುದ್ಧ ಮಿಸ್ಟರ್​ 360 ಎಬಿಡಿ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಅಬ್ಬರದ ಪ್ರದರ್ಶನ ತೋರಿ ಅರ್ಧಶತಕ ಬಾರಿಸಿ ಮಿಂಚಿದರು.

2021ರ ಚೆನ್ನೈನಲ್ಲಿ ನಡೆದಿದ್ದ ಪಂದ್ಯಗಳಲ್ಲಿ 187 ಗರಿಷ್ಠ ಮೊತ್ತವಾಗಿತ್ತು. ಆದರೆ ಆರ್​ಸಿಬಿ ಇಂದು ಕೇವಲ 9 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡು 204 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ.

ಗ್ಲೆನ್ ಮ್ಯಾಕ್ಸ್​ವೆಲ್ ಒತ್ತಡದ ಸನ್ನಿವೇಶದಲ್ಲಿ ಕ್ರೀಸ್​ಗೆ ಆಗಮಿಸಿದರೂ, ಲೀಲಾಜಾಲವಾಗಿ ಬ್ಯಾಟ್​ ಬೀಸಿ ಟೂರ್ನಿಯಲ್ಲಿ 2ನೇ ಅರ್ಧಶತಕ ಸಿಡಿಸಿದರು. ಅವರು 49 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್​ ಸಹಿತ 78 ರನ್​ಗಳಿಸಿ ಆರ್​ಸಿಬಿಗೆ ಭದ್ರ ಬುನಾದಿ ಹಾಕಿದರೆ, ಎಬಿಡಿ ಕೊನೆಯ 3 ಓವರ್​ಗಳಲ್ಲಿ ಬೌಂಡರಿ ಸಿಕ್ಸರ್​ಗಳ ಸುರಿಮಳೆಗೈದರು.

ಸ್ಪಿನ್ನರ್ ಮತ್ತು ಪೇಸರ್‌ಗಳೆನ್ನದೆ​ ದಂಡಿಸಿದ ಅವರು ಕೇವಲ 28 ಎಸೆತಗಳಲ್ಲಿ ಐಪಿಎಲ್‌ನಲ್ಲಿ ತಮ್ಮ 39ನೇ ಅರ್ಧಶತಕ ದಾಖಲಿಸಿದರು. ಒಟ್ಟಾರೆ 34 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 9 ಬೌಂಡರಿಗಳ ಸಹಿತ ಅಜೇಯ 76 ರನ್​ಗಳಿಸಿದರು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ ಟೂರ್ನಿಯಲ್ಲಿ ಚೆಪಾಕ್​ನಲ್ಲಿ 200ರ ಗಡಿ ದಾಟಿದ ಮೊದಲ ತಂಡ ಎನಿಸಿಕೊಂಡಿದೆ.

ಚೆಪಾಕ್​ನಲ್ಲಿ ನಡೆದಿದ್ದ ಹಿಂದಿನ ಪಂದ್ಯಗಳಲ್ಲಿ ಮುಂಬೈ 159, 152, 150, ಕೋಲ್ಕತ್ತಾ 187 ಮತ್ತು ಆರ್​ಸಿಬಿ 149 ರನ್​ಗಳಿಸಿತ್ತು.

ಇದನ್ನೂ ಓದಿ: ಎಬಿಡಿ, ಮ್ಯಾಕ್ಸ್​ವೆಲ್​ ಸ್ಪೋಟಕ ಅರ್ಧಶತಕ: ಕೆಕೆಆರ್​ಗೆ 205ರನ್​ಗಳ ಬೃಹತ್ ಗುರಿ ನೀಡಿದ ಆರ್​ಸಿಬಿ

ABOUT THE AUTHOR

...view details