ಹೈದರಾಬಾದ್ :ಭಾರತೀಯ ಕ್ರಿಕೆಟ್ನ ಉದಯೋನ್ಮುಖ ವೇಗಿ ಮೊಹಮ್ಮದ್ ಸಿರಾಜ್ರನ್ನು ವಿರಾಟ್ ಕೊಹ್ಲಿ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ ಜೊತೆಗೆ ರಿಟೈನ್ ಮಾಡಿಕೊಳ್ಳುವುದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಈ ಮೊದಲಿನ ಮಾಹಿತಿಯಂತೆ ಆರ್ಸಿಬಿ ವಿರಾಟ್ ಕೊಹ್ಲಿ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ರನ್ನು ಉಳಿಸಿಕೊಳ್ಳುವುದು ಪಕ್ಕಾ ಆಗಿತ್ತು. ಮಂಗಳವಾರ ರಿಟೈನ್ ಮಾಡಿಕೊಳ್ಳಲು ಕೊನೆಯ ದಿನಾಂಕವಾಗಿರುವುದರಿಂದ ಬೆಂಗಳೂರು ಹೈದರಾಬಾದ್ ಬೌಲರ್ ಮೊಹಮ್ಮದ್ ಸಿರಾಜ್ರನ್ನು ಉಳಿಸಿಕೊಳ್ಳುವುದಕ್ಕೆ ನಿರ್ಧರಿಸಿದೆ ಎಂದು ಇಎಸ್ಪಿಎನ್ ವರದಿ ಮಾಡಿದೆ.
ರಿಟೈನ್ ಪಾಲಿಸಿಯ ಪ್ರಕಾರ ಮೊದಲ ರಿಟೈನ್ ಆಟಗಾರ 16, 2ನೇ ಕ್ರಿಕೆಟಿಗ 12 ಮತ್ತು 3ನೇ ಕ್ರಿಕೆಟಿಗ 8 ಕೋಟಿ ರೂ. ಪಡೆಯಲಿದ್ದಾರೆ. ಆದರೆ, ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಕರ್ನಾಟಕದ ಸ್ಟಾರ್ ಬ್ಯಾಟರ್ ದೇವದತ್ ಪಡಿಕ್ಕಲ್ ಆರ್ಸಿಬಿಯಿಂದ ಹೊರ ಬಿದ್ದಿದ್ದಾರೆ.
ಸಿರಾಜ್ ಕಳೆದ ಮೂರು ವರ್ಷಗಳಿಂದ ಆರ್ಸಿಬಿಯಲ್ಲಿ ಆಡುತ್ತಿದ್ದಾರೆ. ಮೊದಲ ಆವೃತ್ತಿಯಲ್ಲಿ ದುಬಾರಿಯಾದರೂ ಕಳೆದ 2 ಆವೃತ್ತಿಯಲ್ಲಿ ಸಿರಾಜ್ ಆರ್ಸಿಬಿಯ ಅಗ್ರ ಹಾಗೂ ಎಕನಾಮಿಕಲ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. 2021ರ ಆವೃತ್ತಿಯಲ್ಲಿ 6.78ರ ಎಕಾನಮಿಯಲ್ಲಿ 11 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ: ಐಪಿಎಲ್ ರಿಟೆನ್ಷನ್ 2022 : ಫ್ರಾಂಚೈಸಿಗಳು ಉಳಿಸಿಕೊಳ್ಳುವ ಸಾಧ್ಯತೆಯಿರುವ ಆಟಗಾರರು