ದುಬೈ: ಶುಕ್ರವಾರ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ರೋಚಕ ಜಯ ಸಾಧಿಸಿದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ನಲ್ಲಿ 100ನೇ ಜಯ ಸಾಧಿಸಿದ 4ನೇ ತಂಡ ಎಂಬ ಶ್ರೇಯಕ್ಕೆ ಪಾತ್ರವಾಗಿದೆ.
ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 165 ರನ್ಗಳ ಟಾರ್ಗೆಟ್ಅನ್ನು ಕೊನೆಯ ಎಸೆತದಲ್ಲಿ ತಲುಪಿತು. ಶ್ರೀಕಾರ್ ಭರತ್ ವೇಗಿ ಆವೇಶ್ ಖಾನ್ನ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಸಿಕ್ಸರ್ಗಟ್ಟುವ ಮೂಲಕ ರೋಚಕ ಜಯ ತಂದುಕೊಟ್ಟರು. ಭರತ್ ಅಜೇಯ 78 ರನ್ ಮತ್ತು ಮ್ಯಾಕ್ಸ್ವೆಲ್ ಅಜೇಯ 51 ರನ್ ಗಳಿಸಿದರು.