ನವದೆಹಲಿ:ಟೀಂ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಲಾರ್ಡ್ಸ್‌ನಲ್ಲಿ ಇಂಡ್ಲೆಂಡ್ ವಿರುದ್ಧ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಜಡೇಜಾ ಅವರನ್ನು ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ನ 2ನೇ ದಿನದಾಟದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಕಾಲಿಗೆ ಗಾಯವಾಗಿತ್ತು. ಹೀಗಿದ್ದರೂ ಮತ್ತೆರಡು ದಿನಗಳ ಕಾಲ ಅವರು ಮೈದಾನಕ್ಕಿಳಿದಿದ್ದರು. ಬಳಿಕ ಅವರು ಆಸ್ಪತ್ರೆಗೆ ತೆರಳಿದ್ದಾರೆ. ಈ ಕುರಿತು ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ‘ ಇದು ಒಳ್ಳೆಯ ಸ್ಥಳವಲ್ಲ’ ಎಂದು ಬರೆದುಕೊಂಡಿದ್ದಾರೆ. ಆದರೆ ಜಡೇಜಾ ಗಾಯಕ್ಕೆ ಒಳಗಾಗಿರುವುದು ತಂಡ ಮುಂಬರುವ ಪಂದ್ಯಕ್ಕೆ ಅವರನ್ನ ಆಯ್ಕೆ ಮಾಡಲಿದ್ಯಾ ಅಥವಾ ವಿಶ್ರಾಂತಿ ನೀಡಿ ಅವರ ಜಾಗದಲ್ಲಿ ಬೇರೊಬ್ಬ ಆಟಗಾರನಿಗೆ ಅವಕಾಶ ನೀಡಲಿದ್ದಾರಾ ಎಂಬುದನ್ನು ತಿಳಿಸಿಲ್ಲ.