ಮುಂಬೈ: 2022ರ ಐಪಿಎಲ್ಗೆ ಕೆಲವು ದಿನಗಳಿರುವಾಗ ಎಂ.ಎಸ್.ಧೋನಿ ನಾಯಕತ್ವದಿಂದ ಕೆಳಗಿಳಿದು, ಆ ಜಾಗಕ್ಕೆ ಆಲ್ರೌಂಡರ್ ರವೀಂದ್ರ ಜಡೇಜಾರನ್ನು ಆಯ್ಕೆ ಮಾಡಿದ್ದರು. ಇದೀಗ ಅವರು ಕೇವಲ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪಂದ್ಯದ ವೇಳೆ ಕೆಲವು ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿರುವುದಕ್ಕೆ ಹಲವು ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು.
ಜಡೇಜಾರನ್ನು ನಾಯಕನಾಗಿ ನೇಮಿಸಿದ ನಂತರವೂ ಧೋನಿ ಫೀಲ್ಡ್ ಸೆಟ್ಟಿಂಗ್, ಬೌಲಿಂಗ್ ಬದಲಾವಣೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದನ್ನು ಹರ್ಭಜನ್ ಸಿಂಗ್ ಮತ್ತು ಅಜಯ್ ಜಡೇಜಾ ಟೀಕಿಸಿದ್ದರು. ಜಡೇಜಾ ತಮ್ಮ ನಾಯಕತ್ವದ ಹೊರೆಯನ್ನು ಧೋನಿ ಮೇಲೆ ಹೇರುತ್ತಿದ್ದಾರೆ, ನನಗೆ ಈಗಲೂ ಅವರೇ ನಾಯಕ ಎನ್ನಿಸುತ್ತಿದೆ ಎಂದರೆ, ಅಜಯ್ ಜಡೇಜಾ, ಧೋನಿ ಸಂಪೂರ್ಣ ಪಂದ್ಯವನ್ನು ಮುನ್ನಡೆಸುತ್ತಾರೆ, ಜಡೇಜಾ ಎಲ್ಲೋ ಫೀಲ್ಡ್ ಮಾಡುತ್ತಿರುತ್ತಾರೆ. ಇದು ನೋಡಲು ನನ್ನ ಪ್ರಕಾರ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ, ಪಂಜಾಬ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ್ದ ಜಡೇಜಾ, "ಕೊನೆಯ ಪಂದ್ಯ(ಲಖನೌ ಸೂಪರ್ ಜೈಂಟ್ಸ್) ಹೈ ಸ್ಕೋರಿಂಗ್ ಪಂದ್ಯವಾಗಿತ್ತು. ಹಾಗಾಗಿ ಡೀಪ್ ಮಿಡ್ ವಿಕೆಟ್ನಲ್ಲಿ ಕ್ಯಾಚ್ಗಳು ಹೆಚ್ಚಾಗಿ ಬರುವ ಸಾಧ್ಯತೆಯಿತ್ತು. ಆ ಜಾಗದಲ್ಲಿ ಅತ್ಯುತ್ತಮ ಫೀಲ್ಡರ್ಗಳಿರಬೇಕೆಂದು ನಾವು ಚಿಂತಿಸಿದೆವು. ನಾನು ಅಲ್ಲಿ ಫೀಲ್ಡ್ ಮಾಡುವಾಗ ಬೌಲರ್ಗಳೊಂದಿಗೆ ಮಾತನಾಡುವುದಕ್ಕೆ ಆಗುತ್ತಿರಲಿಲ್ಲ.