ಓವೆಲ್ (ಲಂಡನ್) : ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಎನಿಸಿಕೊಂಡಿರುವ ರವೀಂದ್ರ ಜಡೇಜಾ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಪಂದ್ಯದ ಮೂರನೇ ದಿನ ವಿಶೇಷ ಸಾಧನೆ ಮಾಡಿದರು.
ಈ ಸಾಧನೆ ಮಾಡಿದ ದೇಶದ ಅತ್ಯುತ್ತಮ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ದೊಡ್ಡ ದಾಖಲೆ ನಿರ್ಮಿಸಿದ ದೇಶದ ಖ್ಯಾತ ಆಟಗಾರ ಬಿಷನ್ ಸಿಂಗ್ ಬೇಡಿ ಅವರನ್ನು ಹಿಂದಿಕ್ಕಿದ್ದಾರೆ.
ಭಾರತ ತಂಡದ ಹಿರಿಯ ಆಟಗಾರ ಬಿಶನ್ ಸಿಂಗ್ ಬೇಡಿ ಅವರ ದಾಖಲೆಯನ್ನು ರವೀಂದ್ರ ಜಡೇಜಾ ಮುರಿದಿದ್ದಾರೆ. ಬಿಶನ್ ಸಿಂಗ್ ಬೇಡಿ 67 ಪಂದ್ಯಗಳಲ್ಲಿ 266 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಈಗ 65 ಪಂದ್ಯಗಳಲ್ಲಿ 267 ವಿಕೆಟ್ ಪಡೆದಿದ್ದಾರೆ.
ಇದುವರೆಗೆ 65 ಟೆಸ್ಟ್ ಪಂದ್ಯದಲ್ಲಿ 124 ಇನ್ನಿಂಗ್ಸ್ ಆಡಿರುವ ರವೀಂದ್ರ ಜಡೇಜ 6476 ರನ್ಗಳನ್ನು ಬಿಟ್ಟುಕೊಟ್ಟು, 2.45 ಎಕಾನಮಿಯನ್ನು ಬಾಲ್ ಮಾಡಿದ್ದಾರೆ. ಅದರಂತೆ ಅವರು 24.25ರ ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ. ಅವರು ಅತ್ಯುತ್ತಮ ಬೌಲಿಂಗ್ನಲ್ಲಿ 42 ರನ್ ಕೊಟ್ಟು 7 ವಿಕೆಟ್ ಪಡೆದದ್ದಾಗಿದೆ.
ಇದರ ಜೊತೆಗೆ, ಅವರು ಎಕದಿನ ಮತ್ತು ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ಸ್ಪಿನ್ ಬೌಲರ್ ಆಗಿದ್ದಾರೆ. ಎಡಗೈ ಸ್ಪಿನ್ ಬೌಲರ್ ರವೀಂದ್ರ ಜಡೇಜಾ 174 ಏಕದಿನ ಪಂದ್ಯಗಳಲ್ಲಿ 168 ಇನ್ನಿಂಗ್ಸ್ಗಳನ್ನು ಆಡಿದ್ದು 191 ವಿಕೆಟ್ ಕಬಳಿಸಿದ್ದಾರೆ.