ಕರ್ನಾಟಕ

karnataka

ETV Bharat / sports

ಯಶ್​ ದಯಾಳ್​, ರವೀಂದ್ರ ಜಡೇಜಾ ಬಾಂಗ್ಲಾದೇಶ ಏಕದಿನ ಸರಣಿಯಿಂದ ಔಟ್​ - ಕುಲದೀಪ್​ ಸೇನ್​ ಮತ್ತು ಶಹಬಾಜ್​ ಅಹ್ಮದ್​ಗೆ ಸ್ಥಾನ

ಬಾಂಗ್ಲಾದೇಶ ವಿರುದ್ಧ ನಡೆಯುವ ಏಕದಿನ ಸರಣಿಗೆ ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡಲಾಗಿದೆ. ಗಾಯಾಳು ರವೀಂದ್ರ ಜಡೇಜಾ ಮತ್ತು ಯಶ್​ ದಯಾಳ್​ ತಂಡದಿಂದ ಹೊರಬಿದ್ದಿದ್ದಾರೆ.

ravindra-jadeja-has-been-ruled-out-for-bangladesh-odi-series
ರವೀಂದ್ರ ಜಡೇಜಾ ಬಾಂಗ್ಲಾದೇಶ ಏಕದಿನ ಸರಣಿಯಿಂದ ಔಟ್​

By

Published : Nov 24, 2022, 4:57 PM IST

ನವದೆಹಲಿ:ಡಿಸೆಂಬರ್​ನಲ್ಲಿ ನಡೆಯುವ ಬಾಂಗ್ಲಾದೇಶ ವಿರುದ್ಧದ ಏಕದಿನ, ಟೆಸ್ಟ್​ ಸರಣಿಗೆ ಪ್ರಕಟಿಸಲಾಗಿದ್ದ ಭಾರತ ತಂಡದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಗಾಯಗೊಂಡಿರುವ ತಾರಾ ಆಲ್​ರೌಂಡರ್​ ರವೀಂದ್ರ ಜಡೇಜಾ, ಯಶ್​ ದಯಾಳ್ ಅವರನ್ನು ಕೈಬಿಡಲಾಗಿದೆ.

ಸದ್ಯ ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿರುವ ಭಾರತ ಸರಣಿ ಮುಗಿದ ಬಳಿಕ ಬಾಂಗ್ಲಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಮೂರು ಏಕದಿನ ಮತ್ತು 2 ಟೆಸ್ಟ್ ​ಪಂದ್ಯಗಳನ್ನು ಆಡಲಿದೆ. ಈ ಹಿಂದೆಯೇ ಕಿವೀಸ್​ ಸರಣಿ ಜೊತೆಗೆ ಬಾಂಗ್ಲಾ ಟೂರ್ನಿಗೂ ತಂಡ ಪ್ರಕಟಿಸಲಾಗಿತ್ತು. ಕಾಲಿಗೆ ಗಾಯ ಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರವೀಂದ್ರ ಜಡೇಜಾಗೆ ಸ್ಥಾನ ನೀಡಲಾಗಿತ್ತು.

ಆದರೆ, ಜಡೇಜಾ ಇನ್ನೂ ಚೇತರಿಸಿಕೊಳ್ಳದ ಕಾರಣ ಹೊಸದಾಗಿ ಪ್ರಕಟಿಸಲಾದ ತಂಡದಿಂದ ತಾರಾ ಆಲ್​ರೌಂಡರ್​ ಹೊರಬಿದ್ದಿದ್ದಾರೆ. ಇದಲ್ಲದೇ, ತಂಡದಲ್ಲಿ ಹೊಸದಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದ ಯಶ್​ ದಯಾಳ್​ ಬೆನ್ನುನೋವಿಗೆ ತುತ್ತಾಗಿದ್ದು, ಅವರನ್ನೂ ಕೈಬಿಡಲಾಗಿದೆ.

ಕುಲದೀಪ್​ ಸೇನ್​, ಶಹಬಾಜ್​ ಅಹ್ಮದ್​ಗೆ ಅವಕಾಶ:ಜಡೇಜಾ, ಯಶ್​ ಜಾಗಕ್ಕೆ ಹೊಸ ಪ್ರತಿಭೆಗಳಾದ ಕುಲದೀಪ್​ ಸೇನ್​ ಮತ್ತು ಶಹಬಾಜ್​ ಅಹ್ಮದ್​ಗೆ ಸ್ಥಾನ ನೀಡಲಾಗಿದೆ. ಶಹಬಾಜ್​ ಈಗಾಗಲೇ ನ್ಯೂಜಿಲ್ಯಾಂಡ್​ ಸರಣಿಯಲ್ಲೂ ಅವಕಾಶ ಪಡೆದಿದ್ದಾರೆ. ವಿಜಯ್​ ಹಜಾರೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶಹಬಾಜ್​ ಟೀಂ ಇಂಡಿಯಾದಲ್ಲೂ ಮಿಂಚಲು ಸಜ್ಜಾಗಿದ್ದಾರೆ.

ಬಿಸಿಸಿಐ ಪ್ರಕಟಿಸಿದ ಹೊಸ ತಂಡ:ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್, ಇಶಾನ್ ಕಿಶನ್, ಶಹಬಾಜ್ ಅಹಮ್ಮದ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಕುಲ್ದೀಪ್ ಸೇನ್.

ಓದಿ:ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ: ಬಾಂಗ್ಲಾದೇಶ - ಭಾರತ ಏಕದಿನ ಪಂದ್ಯ ಸ್ಥಳಾಂತರ!

ABOUT THE AUTHOR

...view details