ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ ರವೀಂದ್ರ ಜಡೇಜಾ ಹಾಗು ಪತ್ನಿ ರಿವಾಬಾ ಜಡೇಜಾ ತಮ್ಮ ಮಗಳ 5ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಮಗಳ ಹುಟ್ಟುಹಬ್ಬದ ದಿನ ಬಡ ಹೆಣ್ಣುಮಕ್ಕಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಜಡೇಜಾ - ರವೀಂದ್ರ ಜಡೇಜಾ ಅವರ ಮಗಳು ನಿಧ್ಯಾನಾ
ಕ್ರಿಕೆಟರ್ ರವೀಂದ್ರ ಜಡೇಜಾ ದಂಪತಿ ತಮ್ಮ ಮಗಳ ಹುಟ್ಟುಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ 5 ಕುಟುಂಬದ ಬಡ ಕುಟುಂಬದ ಹೆಣ್ಣುಮಕ್ಕಳ ಹೆಸರಿನಲ್ಲಿ ಉಳಿತಾಯ ಖಾತೆಗಳನ್ನು ತೆರೆದು ಹಣ ಜಮೆ ಮಾಡಿದ್ದಾರೆ.

ಬಡ ಹೆಣ್ಣು ಮಕ್ಕಳಿಗೆ ವಿಶೇಷ ಉಡುಗೊರೆ ನೀಡಿದ ರವೀಂದ್ರ ಜಡೇಜಾ
ಬಡ ಹೆಣ್ಣು ಮಕ್ಕಳಿಗೆ ವಿಶೇಷ ಉಡುಗೊರೆ ನೀಡಿದ ರವೀಂದ್ರ ಜಡೇಜಾ
ಜಡೇಜಾ ಮಗಳು ನಿಧ್ಯಾನಾಗೆ ಈಗ ಐದು ವರ್ಷ ತುಂಬಿದೆ. ಈ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ 5 ಕುಟುಂಬದ ಬಡ ಹೆಣ್ಣುಮಕ್ಕಳ ಹೆಸರಿನಲ್ಲಿ ಜಾಮ್‌ನಗರ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ. ಈ ಖಾತೆಗಳಲ್ಲಿ ತಲಾ 10,000 ಹಣವನ್ನು ಜಮೆ ಮಾಡಿದ್ದಾರೆ.
ರಿವಾಬಾ ಹಾಗು ಜಡೇಜಾ ಸದ್ಯ ಇಂಗ್ಲೆಂಡ್‌ನಲ್ಲಿದ್ದು, ಅಲ್ಲಿಂದಲೇ ವೀಡಿಯೊ-ಕಾನ್ಫರೆನ್ಸ್ ಮೂಲಕ ಫಲಾನುಭವಿಗಳಿಗೆ ಪಾಸ್‌ಬುಕ್ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.