ಕರ್ನಾಟಕ

karnataka

ETV Bharat / sports

ರವೀಂದ್ರ ಜಡೇಜಾ 60 ವರ್ಷಗಳ ನಂತ್ರ ವಿಶೇಷ ದಾಖಲೆಗೆ ಪಾತ್ರನಾದ ಭಾರತೀಯ! - ಭಾರತ ಶ್ರೀಲಂಕಾ ಟೆಸ್ಟ್

ಶನಿವಾರ ಬ್ಯಾಟಿಂಗ್​​ನಲ್ಲಿ ಕಮಾಲ್ ಮಾಡಿದ್ದ ಜಡೇಜಾ 224 ಎಸೆತಗಳಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ ಅಜೇಯ 175 ರನ್​ಗಳಿಸಿದ್ದರು. ಭಾನುವಾರ ಬೌಲಿಂಗ್​ನಲ್ಲೂ ಚಮತ್ಕಾರಿ ಪ್ರದರ್ಶನ ತೋರಿದ ಅವರು ವೃತ್ತಿ ಜೀವನದ 10ನೇ ಬಾರಿ 5 ವಿಕೆಟ್​ ಪಡೆದು ಶ್ರೀಲಂಕಾ ವಿರುದ್ಧ ಫಾಲೋಆನ್​ ಏರಲು ನೆರವಾಗಿದ್ದಾರೆ.

U19 star Yash Dhull score maiden double hundred in Ranji Trophy 2022
ಯಶ್ ಧುಲ್ ದ್ವಿಶತಕ

By

Published : Mar 6, 2022, 9:55 PM IST

ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇನ್ನಿಂಗ್ಸ್​ ಮತ್ತು 222 ರನ್​ಗಳ ಜಯಕ್ಕೆ ಕಾರಣರಾದ ಭಾರತ ತಂಡದ ಆಲ್​ರೌಂಡರ್​ ರವೀಂದ್ರ ಜಡೇಜಾ ಒಂದೇ ಪಂದ್ಯದಲ್ಲಿ 150+ ರನ್​ ಮತ್ತು 5 ವಿಕೆಟ್​ ಪಡೆದ ಭಾರತದ ಮೂರನೇ ಬೌಲರ್​ ಎಂಬ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.

ಶನಿವಾರ ಬ್ಯಾಟಿಂಗ್​​ನಲ್ಲಿ ಕಮಾಲ್ ಮಾಡಿದ್ದ ಜಡೇಜಾ 224 ಎಸೆತಗಳಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ ಅಜೇಯ 175 ರನ್​ಗಳಿಸಿದ್ದರು. ಭಾನುವಾರ ಬೌಲಿಂಗ್​ನಲ್ಲೂ ಚಮತ್ಕಾರಿ ಪ್ರದರ್ಶನ ತೋರಿದ ಅವರು ವೃತ್ತಿ ಜೀವನದ 10ನೇ ಬಾರಿ 5 ವಿಕೆಟ್​ ಪಡೆದು ಶ್ರೀಲಂಕಾ ವಿರುದ್ಧ ಫಾಲೋಆನ್​ ಏರಲು ನೆರವಾಗಿದ್ದಾರೆ.

175 ರನ್​ ಮತ್ತು 41ಕ್ಕೆ 5 ವಿಕೆಟ್ ಪಡೆಯುತ್ತಿದ್ದಂತೆ ಒಂದೇ ಪಂದ್ಯದಲ್ಲಿ ಈ ಡಬಲ್ ಸಾಧನೆ ಮಾಡಿದ ಭಾರತದ ಮೂರನೇ ಕ್ರಿಕೆಟಿಗ ಎನಿಸಿಕೊಂಡರು. 1952 ರಲ್ಲಿ ಇಂಗ್ಲೆಂಡ್​ ವಿರುದ್ಧ ವೀನೂ ಮಂಕಡ್​ 184 ರನ್​ ಮತ್ತು 196ಕ್ಕೆ5 ವಿಕೆಟ್​ ಪಡೆದು ಈ ವಿಶೇಷ ಸಾಧನೆಗೆ ಪಾತ್ರರಾದ ಮೊದಲ ಕ್ರಿಕೆಟಿಗರಾಗಿದ್ದರು. 10 ವರ್ಷಗಳ ನಂತರ ಪಾಲಿ ಉಮ್ರಿಗರ್​ ವೆಸ್ಟ್​ ಇಂಡೀಸ್​ ವಿರುದ್ಧ 172 ರನ್​ ಮತ್ತು 107ಕ್ಕೆ 5 ವಿಕೆಟ್​ ಪಡೆದಿದ್ದರು. ಇದೀಗ ಬರೋಬ್ಬರಿ 60 ವರ್ಷಗಳ ನಂತರ ರವೀಂದ್ರ ಜಡೇಜಾ ಆ ಸಾಲಿಗೆ ಸೇರ್ಪಡೆಗೊಂಡ ಮತ್ತೊಬ್ಬ ಭಾರತೀಯರಾಗಿದ್ದಾರೆ.

ಒಟ್ಟಾರೆ ಟೆಸ್ಟ್​ ಕ್ರಿಕೆಟ್​ನಲ್ಲಿ 1955ರಲ್ಲಿ ಡೇನಿಸ್​ ಅಟ್ಕಿನ್ಸನ್​ (219ರನ್ ಮತ್ತು 56ಕ್ಕೆ6), ಗ್ಯಾರಿ ಸೋಬರ್ಸ್​(201 ಮತ್ತು 49ಕ್ಕೆ 5) ಮತ್ತು ಮುಷ್ತಾಕ್ ಮೊಹಮ್ಮದ್ 201ರನ್​ ಮತ್ತು 49ಕ್ಕೆ5) ಈ ವಿಶೇಷ ಪಟ್ಟಿಯಲ್ಲಿರುವ ಇತರೆ ಕ್ರಿಕೆಟಿಗರಾಗಿದ್ದಾರೆ.

ಮತ್ತೊಂದು ವಿಶೇಷವೆಂದರೆ ರವೀಂದ್ರ ಜಡೇಜಾ ಮೊದಲ ಇನ್ನಿಂಗ್ಸ್​ನಲ್ಲಿ ಈ ಡಬಲ್ ದಾಖಲೆಗೆ ಪಾತ್ರರಾದ 2ನೇ ಕ್ರಿಕೆಟರ್ ಎನಿಸಿಕೊಂಡರು. ಗ್ಯಾರಿ ಸೋಬರ್ಸ್​ ಮಾತ್ರ ಈ ಹಿಂದೆ ಈ ಸಾಧನೆ ಮಾಡಿದ್ದರು.

ಒಟ್ಟಾರೆ ಪಂದ್ಯದಲ್ಲಿ ಜಡೇಜಾ 9 ವಿಕೆಟ್​ ಪಡೆಯುವುದರ ಜೊತೆಗೆ 175 ರನ್​ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಟೆಸ್ಟ್​ ಕ್ರಿಕೆಟ್ ಚರಿತ್ರೆಯಲ್ಲಿ ಯಾವೊಬ್ಬ ಕ್ರಿಕೆಟಿಗ 150+ ರನ್​ ಮತ್ತು ಅದೇ ಪಂದ್ಯದಲ್ಲಿ 9 ವಿಕೆಟ್ ಪಡೆದಿಲ್ಲ.

ಇದನ್ನೂ ಓದಿ:ಐಪಿಎಲ್ ವೇಳಾಪಟ್ಟಿ ಪ್ರಕಟ: ಆರ್​ಸಿಬಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ABOUT THE AUTHOR

...view details