ಮುಂಬೈ:ಭಾರತದ ವಿರುದ್ಧ ವಾಂಖೆಡೆಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 372 ರನ್ಗಳಿಂದ ಸೋಲು ಕಂಡರೂ, ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡದ ಎಲ್ಲ 10 ವಿಕೆಟ್ ಪಡೆದ ಅಜಾಜ್ ಪಟೇಲ್ಗೆ ಭಾರತೀಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶೇಷ ಜರ್ಸಿ ಉಡುಗೊರೆಯಾಗಿ ನೀಡಲಿದ್ದಾರೆ.
ಭಾರತೀಯ ಮೂಲದ ಅಜಾಜ್ ಪಟೇಲ್ 2ನೇ ಟೆಸ್ಟ್ನಲ್ಲಿ 119 ರನ್ ನೀಡಿ 10 ವಿಕೆಟ್ ಬಾಚಿಕೊಂಡಿದ್ದರು. ಈ ಮೂಲಕ ಜಿಮ್ ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆ ಬಳಿಕ ಈ ಸಾಧನೆ ಮಾಡಿದ ವಿಶ್ವದ 3ನೇ ಬೌಲರ್ ಹಾಗೂ ವಿದೇಶಿ ಟೆಸ್ಟ್ನಲ್ಲಿ ಮೊದಲ ಬೌಲರ್ ಎನಿಸಿಕೊಂಡಿದ್ದರು.