ಕರ್ನಾಟಕ

karnataka

ETV Bharat / sports

ಅನಿಲ್​ ಕುಂಬ್ಳೆ ದಾಖಲೆ ಮೇಲೆ ಅಶ್ವಿನ್​, ನಾಥನ್​ ಲಿಯಾನ್​ ಕಣ್ಣು: ಏನದು ಗೊತ್ತಾ? - Ravichandran Ashwin breaks Anil kumble record

ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ ಭಾರತದ ಸ್ಪಿನ್ನರ್​​ ಆರ್.ಅಶ್ವಿನ್​ ಮತ್ತು ಆಸೀಸ್​​ನ ನಾಥನ್​ ಲಿಯಾನ್​ ಅಪರೂಪದ ದಾಖಲೆಯ ಹೊಸ್ತಿಲಲ್ಲಿದ್ದಾರೆ.

anil-kumble-record
ಅನಿಲ್​ ಕುಂಬ್ಳೆ ದಾಖಲೆ

By

Published : Feb 26, 2023, 10:34 AM IST

ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಭಾರತ 2-0 ಯಲ್ಲಿ ಮುನ್ನಡೆ ಸಾಧಿಸಿದ್ದು, ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಮೊದಲೆರಡು ಟೆಸ್ಟ್​ಗಳಲ್ಲಿ ಸೋಲುಂಡಿರುವ ಆಸ್ಟ್ರೇಲಿಯಾ ಮುಂದಿನ ಪಂದ್ಯಗಳಲ್ಲಿ ಉತ್ತಮ ಆಟವಾಡುವ ಮೂಲಕ ಸರಣಿ ಸಮಬಲ ಸಾಧಿಸುವ ತವಕದಲ್ಲಿದೆ. ಇತ್ತ ಭಾರತದ ಹಿರಿಯ ಸ್ಪಿನ್ನರ್​​ ರವಿಚಂದ್ರನ್​ ಅಶ್ವಿನ್​ ಟೆಸ್ಟ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಮಾಜಿ ದಿಗ್ಗಜ ಸ್ಪಿನ್ನರ್​​ ಅನಿಲ್​ ಕುಂಬ್ಳೆ ಅವರ ದಾಖಲೆಯನ್ನು ಅಳಿಸಿ ಹಾಕುವ ಹೊಸ್ತಿಲಲ್ಲಿದ್ದಾರೆ.

ಎರಡು ಟೆಸ್ಟ್ ಪಂದ್ಯಗಳಲ್ಲಿ 14 ವಿಕೆಟ್ ಪಡೆದಿರುವ ಅಶ್ವಿನ್ ಮೂರನೇ ಟೆಸ್ಟ್​ನಲ್ಲಿ ಇನ್ನೂ ಒಂಬತ್ತು ವಿಕೆಟ್ ಪಡೆದರೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ. ಮಾಜಿ ಸ್ಪಿನ್ನರ್​ ಅನಿಲ್​ ಕುಂಬ್ಳೆ 111 ವಿಕೆಟ್​ ಪಡೆದು ಅಗ್ರಸ್ಥಾನದಲ್ಲಿದ್ದಾರೆ. 2ನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ ಅಶ್ವಿನ್​ 100 ವಿಕೆಟ್​ ಸಾಧನೆ ಮಾಡಿದ್ದರು.

ಅಶ್ವಿನ್‌ ಪ್ರಸಕ್ತ ಟೂರ್ನಿಯಲ್ಲಿ​ ಈ ಸಾಧನೆ ಮಾಡಿದ 2ನೇ ಬೌಲರ್​ ಎನ್ನಿಸಿಕೊಂಡಿದ್ದರು. ಇದೀಗ ಅತಿಹೆಚ್ಚು ವಿಕೆಟ್​ ಪಡೆದ ಬೌಲರ್​ ಎಂಬ ಖ್ಯಾತಿಗೂ ಪಾತ್ರರಾಗುವ ಅವಕಾಶವಿದೆ. ಒಟ್ಟಾರೆ ಸರಣಿಯಲ್ಲಿ 103 ವಿಕೆಟ್​ ಪಡೆದಿರುವ ಅಶ್ವಿನ್​ ಇನ್ನೂ 9 ವಿಕೆಟ್​ ಗಳಿಸಿದಲ್ಲಿ ಕುಂಬ್ಳೆ ದಾಖಲೆಯನ್ನು ಮೀರಿ ಅತಿಹೆಚ್ಚು ವಿಕೆಟ್​ ಪಡೆದ ಬೌಲರ್​ ಎಂಬ ದಾಖಲೆ ನಿರ್ಮಿಸಲಿದ್ದಾರೆ. ಈ ಅಪರೂಪದ ದಾಖಲೆ 3ನೇ ಟೆಸ್ಟ್​​ನಲ್ಲಿ ನಿರ್ಮಾಣವಾಗುತ್ತಾ ಎಂಬುದು ಅಭಿಮಾನಿಗಳ ನಿರೀಕ್ಷೆ.

ಇನ್ನು ಅಶ್ವಿನ್​ ಬಳಿಕ ಬಾರ್ಡರ್- ಗವಾಸ್ಕರ್​ ಟ್ರೋಫಿಯಲ್ಲಿ 100 ವಿಕೆಟ್​ ಸಾಧನೆ ಮಾಡಿದ ಆಸ್ಟ್ರೇಲಿಯಾದ ಏಕೈಕ ಆಟಗಾರ ನಾಥನ್​ ಲಿಯಾನ್​ ಆಗಿದ್ದಾರೆ. ಲಿಯಾನ್​ 2ನೇ ಟೆಸ್ಟ್​​ ವೇಳೆ 'ಶತಕ'ದ ವಿಕೆಟ್​ ಗಳಿಸಿದರು. ಇದುವರೆಗೆ 102 ವಿಕೆಟ್ ಪಡೆದಿರುವ ಲಿಯಾನ್​ ಈ ದಾಖಲೆಯ ರೇಸ್‌ನಲ್ಲಿದ್ದಾರೆ. ಇನ್ನೂ 10 ವಿಕೆಟ್ ಗಳಿಸಿದಲ್ಲಿ ಕುಂಬ್ಳೆ ದಾಖಲೆಯನ್ನು ಮೀರಲಿದ್ದಾರೆ. ಉಭಯ ತಂಡಗಳ ಸ್ಪಿನ್ನರ್​ಗಳಿಗೆ ಅತಿ ಹೆಚ್ಚು ವಿಕೆಟ್​ ಗಳಿಸುವ ಅವಕಾಶವಿದೆ.

ಇನ್ನೂ ಎರಡು ಟೆಸ್ಟ್‌ ಪಂದ್ಯಗಳು ಬಾಕಿ ಇದ್ದು, ಭಾರತ ಇನ್ನೊಂದು ಪಂದ್ಯ ಗೆದ್ದಲ್ಲಿ ಸರಣಿ ಕೈವಶವಾಗಲಿದೆ. ಅಲ್ಲದೇ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. 3ನೇ ಟೆಸ್ಟ್​ ಪಂದ್ಯ ಮಾರ್ಚ್​ 1 ರಿಂದ ಮುಂಬೈನ ಹೋಳ್ಕರ್​ ಮೈದಾನದಲ್ಲಿ ನಡೆಯಲಿದೆ. 4ನೇ ಮತ್ತು ಕೊನೆಯ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ.

ಆಸೀಸ್​ ನಾಯಕತ್ವ ಬದಲು:ಸತತ ಸೋಲಿನಿಂದ ತೀವ್ರ ಟೀಕೆಗೆ ಗುರಿಯಾಗಿರುವ ಆಸ್ಟ್ರೇಲಿಯಾ ತಂಡದ ನಾಯಕ, ವೇಗಿ ಪ್ಯಾಟ್​ ಕಮಿನ್ಸ್​ ಅವರು ತವರಿಗೆ ಹಿಂತಿರುಗಿದ್ದಾರೆ. ಅವರ ತಾಯಿಗೆ ಅನಾರೋಗ್ಯದ ಕಾರಣ ಅವರು ಆಸ್ಟ್ರೇಲಿಯಾಗೆ ವಾಪಸ್​ ಆಗಿದ್ದಾರೆ. ಹೀಗಾಗಿ ಮೂರನೇ ಟೆಸ್ಟ್​ ಪಂದ್ಯದಿಂದ ಕಮಿನ್ಸ್​ ಹೊರಗುಳಿಯಲಿದ್ದು, ತಂಡವನ್ನು ಮಾಜಿ ನಾಯಕ ಸ್ಟೀವ್ ಸ್ಮಿತ್ ಮುನ್ನಡೆಸುವರು. ಸ್ವೀವ್​ ಸ್ಮಿತ್​ ಈ ಹಿಂದೆ ನಾಯಕರಾಗಿದ್ದಾರೆ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಕೆಲ ವರ್ಷ ಕ್ರಿಕೆಟ್​ನಿಂದ ಅಮಾನತಾಗಿದ್ದರು.

ಇದನ್ನೂ ಓದಿ:ಸಚಿನ್‌ ಡಬಲ್‌ ಸೆಂಚುರಿಗೆ 13 ವರ್ಷ: ಭಾರತದ 'ದ್ವಿಶತಕ' ವೀರರು ಇವರು..

ABOUT THE AUTHOR

...view details