ಕರ್ನಾಟಕ

karnataka

ETV Bharat / sports

ಐಪಿಎಲ್​ಗೆ ಹೊಸ ರೂಪದಲ್ಲಿ ರೀ ಎಂಟ್ರಿ ಕೊಡಲಿದ್ದಾರೆ ಸುರೇಶ್​ ರೈನಾ

2020 ಆವೃತ್ತಿಯನ್ನು ಹೊರತುಪಡಿಸಿ ಐಪಿಎಲ್​ನ ಎಲ್ಲಾ ಆವೃತ್ತಿಯಲ್ಲೂ ಆಡಿರುವ ರೈನಾ, ಇದೀಗ ಮೊದಲ ಬಾರಿ ಆಟಗಾರನಾಗಿ ಶ್ರೀಮಂತ ಲೀಗ್​ನಿಂದ ಹೊರಗುಳಿದಿದ್ದಾರೆ. ರೈನಾ ಹಾಗೂ ರವಿಶಾಸ್ತ್ರಿ ಈ ಬಾರಿ ಐಪಿಎಲ್​ನ ಹಿಂದಿ ಕಾಮೆಂಟೇಟರ್ ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

Suresh Raina to Join Commentary Panel for IPL 2022
ಸುರೇಶ್ ರೈನಾ

By

Published : Mar 16, 2022, 4:55 PM IST

Updated : Mar 17, 2022, 9:45 AM IST

ಮುಂಬೈ: 'ಮಿಸ್ಟರ್ ಐಪಿಎಲ್' ಎಂದೇ ಖ್ಯಾತರಾಗಿರುವ ಸುರೇಶ್ ರೈನಾ 2022ರ ಐಪಿಎಲ್​ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಿದ್ಧರಾಗಿದ್ದಾರೆ. ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್ ಆಗಿರುವ ರೈನಾ, ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಾಮೆಂಟೇಟರ್​ ಆಗಿ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ.

2020ರ ಆವೃತ್ತಿಯನ್ನು ಹೊರತುಪಡಿಸಿ ಐಪಿಎಲ್​ನ ಎಲ್ಲಾ ಆವೃತ್ತಿಯಲ್ಲೂ ಆಡಿರುವ ರೈನಾ, ಇದೀಗ ಮೊದಲ ಬಾರಿ ಆಟಗಾರನಾಗಿ ಶ್ರೀಮಂತ ಲೀಗ್​ನಿಂದ ಹೊರಗುಳಿದಿದ್ದಾರೆ. ರೈನಾ ಹಾಗೂ ರವಿಶಾಸ್ತ್ರಿ ಈ ಬಾರಿ ಐಪಿಎಲ್​ನ ಹಿಂದಿ ಕಾಮೆಂಟೇಟರ್​​ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ರವಿಶಾಸ್ತ್ರಿ 2017ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ಕಾಮೆಂಟರಿಯಿಂದ ದೂರ ಉಳಿದಿದ್ದರು. ಐಪಿಎಲ್​ನ ಹೊಸ ತಂಡಗಳಿಗೆ ಕೋಚ್ ಆಗಬಹುದು ಎಂಬ ಗುಸುಗುಸು ಕೇಳಿ ಬಂದರೂ ಅದು ಜರುಗಲಿಲ್ಲ. ಹಾಗಾಗಿ ಮತ್ತೆ ತಮ್ಮಿಷ್ಟದ ವೀಕ್ಷಕ ವಿವರಣೆಯ ಕಾರ್ಯಕ್ಕೆ ಮರು ಪ್ರವೇಶ ಮಾಡುತ್ತಿದ್ದಾರೆ.

ರೈನಾ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ 205 ಪಂದ್ಯಗಳನ್ನಾಡಿದ್ದು, 5,528 ರನ್ ​ಗಳಿಸಿದ್ದಾರೆ. ಅವರು ಚೆನ್ನೈ ಸೂಪರ್​ ಕಿಂಗ್ಸ್​ ಪರವೇ 176 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 32.32ರ ಸರಾಸರಿಯಲ್ಲಿ 4,787 ರನ್ ​ಬಾರಿಸಿದ್ದರು.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್​ ಬಸ್ ಕಿಟಕಿ ಗಾಜು ಪುಡಿಗಟ್ಟಿದ MNS​ ಕಾರ್ಯಕರ್ತರು

Last Updated : Mar 17, 2022, 9:45 AM IST

ABOUT THE AUTHOR

...view details