ಕರ್ನಾಟಕ

karnataka

ETV Bharat / sports

'ಕನಸು ನನಸಾಗಿದೆ..': ಪದಾರ್ಪಣೆ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಆಟವಾಡಿದ ರವಿ ಬಿಷ್ಣೋಯಿ - ಪಂದ್ಯದ ಬಗ್ಗೆ ರವಿ ಬಿಷ್ಣೋಯಿ ಮಾತು

ಟೀಂ ಇಂಡಿಯಕ್ಕಾಗಿ ಆಡಿದ ಮೊದಲ ಪಂದ್ಯದಲ್ಲಿ ನಾನು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನನ್ನ ಕನಸೀಗ ನನಸಾಗಿದೆ ಎಂದು ರವಿ ಬಿಷ್ಣೋಯಿ ಖುಷಿ ವ್ಯಕ್ತಪಡಿಸಿದ್ದಾರೆ.

ravi-bishnoi-on-debut-man-of-the-match
'ಕನಸು ನನಸಾಗಿದೆ': ಮೊದಲ ಮ್ಯಾಚ್​ನಲ್ಲಿ ಪಂದ್ಯಶ್ರೇಷ್ಠ ಪಡೆದ ರವಿ ಬಿಷ್ಣೋಯಿ ಸಂತಸ

By

Published : Feb 17, 2022, 7:49 AM IST

ಕೋಲ್ಕತ್ತಾ:ಈಡನ್ ಗಾರ್ಡನ್​ ಮೈದಾನದಲ್ಲಿ ನಿನ್ನೆ ನಡೆದ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಆಟವಾಡಿದ ಲೆಗ್​ ಸ್ಪಿನ್ನರ್ ರವಿ ಬಿಷ್ಣೋಯಿ ತನ್ನ ಕನಸು ನನಸಾದ ಕುರಿತು ಸಂತಸ ಹಂಚಿಕೊಂಡರು.

ಪಂದ್ಯದ ನಂತರ ಮಾತನಾಡಿರುವ ಅವರು, ಮೊದಲಿದ್ದ ಹಿಂಜರಿಕೆ ಈಗ ಇಲ್ಲ. ನನ್ನ ಆಟದ ಬಗ್ಗೆ ತುಂಬಾ ಸಂತೋಷವಾಗಿದೆ. ದೇಶಕ್ಕಾಗಿ ಆಡುವುದು ಪ್ರತಿಯೊಬ್ಬರ ಕನಸು. ನನ್ನ ಕನಸು ನನಸಾಗಿದೆ ಎಂದರು.

ಲೆಂತ್​ನಲ್ಲಿ ಎಸೆಯುವುದು ನನ್ನ ಬೌಲಿಂಗ್ ಶಕ್ತಿಯಾಗಿದ್ದು, ಅದನ್ನು ಪ್ರಯತ್ನಿಸಿದ್ದೇನೆ. ಪಂದ್ಯದಲ್ಲಿ ಅದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿದ್ದೆ. ಟೀಂ ಇಂಡಿಯಾಗಾಗಿ ಆಡಿದ ಮೊದಲ ಪಂದ್ಯದಲ್ಲಿ ನಾನು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆಯುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ರವಿ ಬಿಷ್ಣೋಯಿ ತಿಳಿಸಿದರು.

ರೋಹಿತ್ ಶರ್ಮಾ ಮೆಚ್ಚುಗೆ: ಬಿಷ್ಣೋಯಿ ಅವರ ಆಕರ್ಷಕ ಆಟಕ್ಕೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಷ್ಣೋಯ್ ಅವರಿಗೆ ಒಳ್ಳೆಯ ಭವಿಷ್ಯವಿದೆ. ಪಂದ್ಯದ ಪವರ್‌ಪ್ಲೇಯಿಂದ ಇನ್ನಿಂಗ್ಸ್‌ನ ಬ್ಯಾಕ್-ಎಂಡ್‌ವರೆಗೆ, ಯಾವ ವೇಳೆಯಲ್ಲಾದರೂ ಅವರು ಬೌಲ್ ಮಾಡಬಹುದು. ಬೌಲರ್​ಗಳನ್ನು ರೊಟೇಷನ್ ಮಾಡಲು ಬಿಷ್ಣೋಯಿ ಆಯ್ಕೆ ನೀಡುತ್ತಾರೆ. ಬೌಲರ್​ಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ನಮಗೆ ಸಂಬಂಧಿಸಿರುತ್ತದೆ ಎಂದು ರೋಹಿತ್ ತಿಳಿಸಿದರು.

ನಿನ್ನೆ ನಡೆದ ಪಂದ್ಯದಲ್ಲಿ ಆತಿಥೇಯ ಟೀ ಇಂಡಿಯಾ 4 ವಿಕೆಟ್​ ಅಂತರದಿಂದ ವಿಂಡೀಸ್​ ವಿರುದ್ಧ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ರ ಮುನ್ನಡೆ ಗಳಿಸಿತು.

ABOUT THE AUTHOR

...view details