ಕರ್ನಾಟಕ

karnataka

ರಶೀದ್, ಹೊಲ್ಡರ್ ದಾಳಿಗೆ ಮಂಕಾದ ಆರ್​ಸಿಬಿ.. ಹೈದರಾಬಾದ್​ಗೆ 150 ರನ್​ಗಳ ಸಾಧಾರಣ ಟಾರ್ಗೆಟ್ ನೀಡಿದ ಕೊಹ್ಲಿ ಬಳಗ

By

Published : Apr 14, 2021, 9:23 PM IST

Updated : Apr 14, 2021, 9:31 PM IST

ಗ್ಲೇನ್ ಮ್ಯಾಕ್ಸ್​ವೆಲ್ ಅವರ 59 ರನ್​ಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ 2ನೇ ಪಂದ್ಯದಲ್ಲಿ ಹೈದರಾಬಾದ್​ ತಂಡಕ್ಕೆ 150 ರನ್​ಗಳ ಟಾರ್ಗೆಟ್ ನೀಡಿದೆ.

ಹೈದರಾಬಾದ್​ಗೆ 150ರನ್​ಗಳ ಸಾಧಾರಣ ಟಾರ್ಗೆಟ್ ನೀಡಿದ ಕೊಹ್ಲಿ ಬಳಗ
ಹೈದರಾಬಾದ್​ಗೆ 150ರನ್​ಗಳ ಸಾಧಾರಣ ಟಾರ್ಗೆಟ್ ನೀಡಿದ ಕೊಹ್ಲಿ ಬಳಗ

ಚೆನ್ನೈ: ಸನ್​ರೈಸರ್ಸ್​ ಹೈದರಾಬಾದ್​ ಶಿಸ್ತು ಬದ್ದ ಬೌಲಿಂಗ್ ದಾಳಿಯ ಮುಂದೆ ಮಂಕಾದ ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 149ರನ್​ಗಳಿಸಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 6ನೇ ಪಂದ್ಯದಲ್ಲಿ ಟಾಸ್​ ಗೆದ್ದ ಹೈದರಾಬಾದ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಲ್ಲದೆ ಆರಂಭದಲ್ಲೇ ಪಡಿಕ್ಕಲ್​(11) ವಿಕೆಟ್ ಪಡೆಯಲು ಯಶಸ್ವಿಯಾಯಿತು. ನಂತರ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ಶಹ್ಬಾಜ್ ಅಹ್ಮದ್​ 10 ಎಸೆತಗಳಲ್ಲಿ 14 ರನ್​ಗಳಿಸಿ ನದೀಮ್​ಗೆ ವಿಕೆಟ್ ಒಪ್ಪಿಸಿದರು. ನಂತರ 3ನೇ ವಿಕೆಟ್​​ಗೆ​ ಒಂದಾದ ಕೊಹ್ಲಿ ಮತ್ತು ಮ್ಯಾಕ್ಸ್​ವೆಲ್​ 44 ರನ್​ ಜೊತೆಯಾಟ ನೀಡಿ ಚೇತರಿಕೆ ನೀಡಿದರು.

ಆದರೆ, ಈ ಹಂತದಲ್ಲಿ ಕಣಕ್ಕಿಳಿದ ಹೋಲ್ಡರ್​, 29 ಎಸೆತಗಳಲ್ಲಿ 33 ರನ್​ಗಳಿಸಿದ್ದ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ವಿಕೆಟ್ ಪಡೆದು ಆರ್​ಸಿಬಿಗೆ ಮರ್ಮಾಘಾತ ನೀಡಿದರು. ನಂತರದ ಓವರ್​ನಲ್ಲೇ ವಿಲಿಯರ್ಸ್​ ಅವರನ್ನು​ 1 ರನ್​ಗೆ ಔಟ್ ಮಾಡುವ ಮೂಲಕ ರಶೀದ್ ಖಾನ್​ ಆರ್​ಸಿಬಿಯ ಬೃಹತ್​ ಮೊತ್ತದ ಕನಸು ನುಚ್ಚುನೂರು ಮಾಡಿದರು.

ವಿಲಿಯರ್ಸ್ ವಿಕೆಟ್ ನಂತರ ಆರ್​ಸಿಬಿ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ 8, ಡೇನಿಯಲ್ ಕ್ರಿಸ್ಚಿಯನ್ 1, ಕೈಲ್ ಜೇಮಿಸನ್ 12 ರನ್​ಗಳಿಸಿ ಔಟಾದರು. ಏಕಾಂಗಿಯಾಗಿ ಹೋರಾಡಿದ ಗ್ಲೇನ್ ಮ್ಯಾಕ್ಸ್​ವೆಲ್, 41 ಎಸೆತಗಳಲ್ಲಿ 3 ಸಿಕ್ಸರ್​ ಮತ್ತು 5 ಬೌಂಡರಿ ಸೇರಿದಂತೆ 59 ರನ್​ಗಳಿಸಿ ಕೊನೆಯ ಎಸೆತದಲ್ಲಿ ಔಟಾದರು. ಒಟ್ಟಾರೆ, 20 ಓವರ್​ಗಳಲ್ಲಿ 8 ವಿಕೆಟ್​ ಕೆಳದುಕೊಂಡ ಬೆಂಗಳೂರು 150 ಗಡಿ ದಾಟಲು ವಿಫಲವಾಯಿತು.

ಸನ್​ರೈಸರ್ಸ್​ ಹೈದರಾಬಾದ್​ ಪರ ಜೇಸನ್ ಹೋಲ್ಡರ್​ 30ಕ್ಕೆ 3, ರಶೀದ್ ಖಾನ್ 18ಕ್ಕೆ 2ಮ ನದೀಮ್​ 36ಕ್ಕೆ 1, ಭುವನೇಶ್ವರ್ ಕುಮಾರ್ 30ಕ್ಕೆ1 ಮತ್ತು ನಟರಾಜನ್​ 32ಕ್ಕೆ 1 ವಿಕೆಟ್ ಪಡೆದು ಆರ್​ಸಿಬಿಯನ್ನು 149ಕ್ಕೆ ಕಟ್ಟಿ ಹಾಕಿದರು.

Last Updated : Apr 14, 2021, 9:31 PM IST

ABOUT THE AUTHOR

...view details