ಕರ್ನಾಟಕ

karnataka

ETV Bharat / sports

ರಣಜಿ ಟ್ರೋಫಿ: ಕ್ವಾರ್ಟರ್​ ಫೈನಲ್​​ನಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದ ಕರ್ನಾಟಕ - ಕರ್ನಾಟಕ ವಿರುದ್ಧ ಗೆದ್ದ ಉತ್ತರ ಪ್ರದೇಶ

ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಉತ್ತರ ಪ್ರದೇಶ ರಣಜಿ ತಂಡ ಕ್ವಾರ್ಟರ್​ ಫೈನಲ್​​ನಲ್ಲಿ ಬಲಿಷ್ಠ ಕರ್ನಾಟಕ ವಿರುದ್ಧ ಗೆಲುವಿನ ನಗೆ ಬೀರಿತು. ಈ ಮೂಲಕ ಸೆಮಿಫೈನಲ್​ಗೆ ಲಗ್ಗೆ ಹಾಕಿದೆ.

Uttar pradesh beat Karnataka in Quarter final
Uttar pradesh beat Karnataka in Quarter final

By

Published : Jun 8, 2022, 5:08 PM IST

ಆಲೂರು (ಬೆಂಗಳೂರು):ತೀವ್ರ ಕುತೂಹಲ ಮೂಡಿಸಿದ್ದ ಉತ್ತರ ಪ್ರದೇಶ-ಕರ್ನಾಟಕ ತಂಡಗಳ ನಡುವಿನ ರಣಜಿ ಟ್ರೋಫಿಯ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ಸೋಲು ಕಂಡಿತು. ಈ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು, ಉತ್ತರ ಪ್ರದೇಶ ಸೆಮಿಫೈನಲ್​ ಪ್ರವೇಶಿಸಿತು. ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ 213ರನ್​ಗಳ ಗುರಿ ಬೆನ್ನತ್ತಿದ್ದ ಎದುರಾಳಿ ತಂಡ 5 ವಿಕೆಟ್​​ಗಳ ಜಯ ದಾಖಲಿಸಿದೆ.

ತಂಡದ ಪರ 2ನೇ ಇನ್ನಿಂಗ್ಸ್​​​ನಲ್ಲಿ ತಾಳ್ಮೆಯ ಬ್ಯಾಟಿಂಗ್​ ಪ್ರದರ್ಶಿಸಿದ ಕ್ಯಾಪ್ಟನ್​ ಕರಣ್ ಶರ್ಮಾ(93) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ ಕರ್ನಾಟಕ 253ರನ್​​ಗಳಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಉತ್ತರ ಪ್ರದೇಶ ಕೇವಲ 155ರನ್​​ಗಳಿಗೆ ಆಲೌಟ್​ ಆಗಿತ್ತು. ಹೀಗಾಗಿ, ಮನೀಷ್ ಪಾಂಡೆ ಬಳಗಕ್ಕೆ 98ರನ್​ಗಳ ಮುನ್ನಡೆ ಸಿಕ್ಕಿತ್ತು. ಆದರೆ, ಎರಡನೇ ಇನ್ನಿಂಗ್ಸ್​​ನಲ್ಲಿ ಕರ್ನಾಟಕ ಕೇವಲ 114ರನ್​​ಗಳಿಗೆ ಆಲೌಟ್​ ಆಗಿ, ಯುಪಿ ತಂಡಕ್ಕೆ 213ರನ್​ಗಳ ಗೆಲುವಿನ ಗುರಿ ನೀಡಿತ್ತು.

ಈ ಗುರಿ ಬೆನ್ನತ್ತಿದ್ದ ಉತ್ತರ ಪ್ರದೇಶ ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಪ್ರಿಯಂ ಗರ್ಗ್​​(52) ಹಾಗೂ ನಾಯಕ ಕರಣ್ ಶರ್ಮಾ(93)ರನ್​ಗಳ ನೆರವಿನಿಂದ 65.2 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 213ರನ್​ಗಳಿಸಿ, ಗೆಲುವು ಸಾಧಿಸಿದೆ.

ಸಂಕ್ಷಿಪ್ತ ಸ್ಕೋರ್​: ಕರ್ನಾಟಕ ಮೊದಲ ಇನ್ನಿಂಗ್ಸ್​​ 253/10, ಎರಡನೇ ಇನ್ನಿಂಗ್ಸ್​​ 114/10, ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್​​ 155/10, ಎರಡನೇ ಇನ್ನಿಂಗ್ಸ್​​ 213/5

ABOUT THE AUTHOR

...view details