ಆಲೂರು(ಬೆಂಗಳೂರು):ಪ್ರಸಕ್ತ ಸಾಲಿನ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಶ್ಚಿಮ ಬಂಗಾಳ ಬ್ಯಾಟರ್ ಮನೋಜ್ ತಿವಾರಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಜಾರ್ಖಂಡ್ ವಿರುದ್ಧ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 73 ರನ್ಗಳಿಕೆ ಮಾಡಿದ್ದ ಇವರು ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದರು. ಉಭಯ ತಂಡಗಳ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆದುಕೊಂಡ ಕಾರಣ ಪ.ಬಂಗಾಳ ಸೆಮಿಫೈನಲ್ ಪ್ರವೇಶಿಸಿದೆ.
ಶತಕ ಸಿಡಿಸುತ್ತಿದ್ದಂತೆ ಶಿಖರ್ ಧವನ್ ರೀತಿಯಲ್ಲಿ ತೊಡೆತಟ್ಟಿದ ತಿವಾರಿ, ಮೈದಾನದಲ್ಲಿ ಖುಷಿ ವ್ಯಕ್ತಪಡಿಸಿದರು. ಸಚಿವರಾಗಿ ಆಯ್ಕೆಯಾದ ಬಳಿಕ ಇದು ಅವರ ಬ್ಯಾಟ್‌ನಿಂದ ಸಿಡಿದ ಮೊದಲ ಶತಕ. ಈ ಹಿಂದೆ 2019-20ರ ಸಾಲಿನಲ್ಲಿ ಹೈದರಾಬಾದ್ ವಿರುದ್ಧದ ಇವರು ಅಜೇಯ 303 ರನ್ಗಳಿಕೆ ಮಾಡಿದ್ದರು.