ಕರ್ನಾಟಕ

karnataka

ETV Bharat / sports

ರಣಜಿ ಫೈನಲ್ 2ನೇ ದಿನದಾಟ​: ಮುಂಬೈಗೆ ಸರ್ಫರಾಜ್​ ಶತಕದ ಬಲ​, ಮಧ್ಯಪ್ರದೇಶ 1 ವಿಕೆಟ್​ಗೆ 123 - ಬೆಂಗಳೂರಿನಲ್ಲಿ ರಣಜಿ ಫೈನಲ್​

ಮಧ್ಯಪ್ರದೇಶ ಹಾಗು ಮುಂಬೈ ಮಧ್ಯೆ ಬೆಂಗಳೂರಿನಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯದ ಎರಡನೇ ದಿನದಾಟದಲ್ಲಿ ಮಧ್ಯಪ್ರದೇಶ 123 ರನ್​ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

ಸರ್ಫರಾಜ್​ ಖಾನ್​ ಶತಕ​, ಮಧ್ಯಪ್ರದೇಶ 1 ವಿಕೆಟ್​ಗೆ 123
ಸರ್ಫರಾಜ್​ ಖಾನ್​ ಶತಕ​, ಮಧ್ಯಪ್ರದೇಶ 1 ವಿಕೆಟ್​ಗೆ 123

By

Published : Jun 23, 2022, 6:07 PM IST

ಬೆಂಗಳೂರು:ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಮತ್ತು ಮಧ್ಯಪ್ರದೇಶ ಮಧ್ಯೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್​ ಪಂದ್ಯದ 2 ದಿನದಾಟ ಮುಕ್ತಾಯವಾಗಿದೆ. ಮುಂಬೈ ನೀಡಿದ 374 ರನ್​ಗಳ ಗುರಿ ಬೆನ್ನತ್ತಿದ ಮಧ್ಯಪ್ರದೇಶ 1 ವಿಕೆಟ್​ ನಷ್ಟಕ್ಕೆ 123 ರನ್​ ಗಳಿಸಿ ಸುಸ್ಥಿತಿಯಲ್ಲಿದೆ.

ಮೊದಲ ದಿನದಾಟದಲ್ಲಿ 5 ವಿಕೆಟ್​ ನಷ್ಟಕ್ಕೆ 248 ರನ್​ ಗಳಿಸಿದ್ದ ಮುಂಬೈ 2ನೇ ದಿನದಾಟ ಆರಂಭಿಸಿ ಬೃಹತ್​ ಮೊತ್ತ ಗಳಿಸುವ ಇರಾದೆಯಲ್ಲಿತ್ತು. ಆದರೆ, ಇದಕ್ಕೆ ಕಡಿವಾಣ ಹಾಕಿದ ಮಧ್ಯಪ್ರದೇಶ ಬೌಲರ್​ಗಳು 374 ರನ್​ಗಳಿಗೆ ಇನಿಂಗ್ಸ್​ ಮುಗಿಸಿತು. ಮುಂಬೈ ತಂಡ ಮೊದಲ ಅವಧಿಯಲ್ಲಿಯೇ 128 ರನ್​ ಗಳಿಸಿ ಆಲೌಟ್​ ಆಯಿತು.

ಸರ್ಫರಾಜ್​ ಖಾನ್​ ಶತಕ: ಮೊದಲ ದಿನದಾಟದಲ್ಲಿ 48 ರನ್​ ಗಳಿಸಿ ಅಜೇಯರಾಗಿ ಉಳಿದಿದ್ದ ಸರ್ಫರಾಜ್​ ಖಾನ್​ ಶತಕ ಸಾಧನೆ ಮಾಡಿದರು. 2 ಸಿಕ್ಸರ್​, 13 ಬೌಂಡರಿ ಸಮೇತ 134 ರನ್​ ಗಳಿಸಿ ರಣಜಿಯಲ್ಲಿ ಮತ್ತೊಂದು ಶತಕ ಬಾರಿಸಿದರು.

ಇನ್ನುಳಿದಂತೆ ಹಾರ್ದಿಕ್​ ತಮೋರೆ 24, ಶಮ್ಸ್​ ಮುಲಾನೆ 12, ತನುಷ್ ಕೊಟೇಯ್ನ್​ 15 ರನ್​ ಗಳಿಸಿ ಔಟಾಗುವ ಮೂಲಕ ಮಧ್ಯಪ್ರದೇಶಕ್ಕೆ ಬೃಹತ್​ ಮೊತ್ತ ನೀಡುವ ಗುರಿ ಈಡೇರಲಿಲ್ಲ.

ಮಧ್ಯಪ್ರದೇಶದ ಪರ ಕರಾರುವಾಕ್​ ದಾಳಿ ನಡೆಸಿದ ಗೌರವ್​ ಯಾದವ್​ 4 ವಿಕೆಟ್​, ಅನುಭವ್​ ಅಗರ್​ವಾಲ್​ 3 ಸರನ್​ಶಾ ಜೈನ್​ 2 ವಿಕೆಟ್​ ಪಡೆದು ಮುಂಬೈಗೆ ಪೆಟ್ಟು ನೀಡಿದರು.

ಮಧ್ಯಪ್ರದೇಶ ಉತ್ತಮ ಆರಂಭ:ಮುಂಬೈ ನೀಡಿದ 374 ರನ್​ಗಳಿಗೆ ಉತ್ತರವಾಗಿ ಬ್ಯಾಟ್​ ಮಾಡಿದ ಮಧ್ಯಪ್ರದೇಶ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ಹಿಮಾಂಶು ಮಂತ್ರಿ (31), ಯಶ್​ ದುಬೆ (44) ಮೊದಲ ವಿಕೆಟ್​ಗೆ 47 ರನ್​ ಗಳಿಸಿದರು. ಹಿಮಾಂಶು ಔಟಾದ ಬಳಿಕ ಬಂದ ಶುಭಂ ಶರ್ಮಾ 41 ರನ್​ ಗಳಿಸಿ ಯಶ್​ ದುಬೆ ಜೊತೆ ನಾಳೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಮುಂಬೈನ ತುಷಾರ್​ ದೇಶ್​ಪಾಂಡೆ 1 ವಿಕೆಟ್​ ಪಡೆದರು.

ಓದಿ;IND W vs SL W 1st T20: 34 ರನ್​ಗಳ ಗೆಲುವು ಸಾಧಿಸಿದ ಭಾರತ ಮಹಿಳೆಯರು, ಸರಣಿ ಶುಭಾರಂಭ

ABOUT THE AUTHOR

...view details