ಮುಂಬೈ:ಭಾರತ, ಪಾಕಿಸ್ತಾನ ಸೇರಿದಂತೆ 4 ರಾಷ್ಟ್ರಗಳ ಚತುಷ್ಕೋನ ಸರಣಿಯನ್ನು ಆಯೋಜಿಸುವ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಅವರ ಪ್ರಸ್ತಾವನೆಯನ್ನು ಐಸಿಸಿ ಸಭೆಯಲ್ಲಿ ಅವಿರೋಧವಾಗಿ ತಿರಸ್ಕರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಟೂರ್ನಮೆಂಟ್ನಿಂದ ವಾರ್ಷಿಕವಾಗಿ 750 ಮಿಲಿಯನ್ ಯುಎಸ್ ಡಾಲರ್ ಆದಾಯ ಬರಲಿದೆ ಎಂದು ರಾಜಾ ತಮ್ಮ ಪ್ರಸ್ತಾವನೆಯಲ್ಲಿ ವಿವರಿಸಿದ್ದರು.
ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳೊಂದಿಗೆ ಟೂರ್ನಮೆಂಟ್ ಆಯೋಜಿಸಲು ಈ ತೀರ್ಮಾನ ಕೈಗೊಂಡಿದ್ದರು. ಆದರೆ, ಐಸಿಸಿ ಮಾತ್ರ ಪಾಕಿಸ್ತಾನ ಮಂಡಳಿ ಅಧ್ಯಕ್ಷರ ಪ್ರಸ್ತಾವನೆಯನ್ನು ಐಸಿಸಿ ವಜಾಮಾಡಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಬಿಸಿಸಿಐ ಈ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿತ್ತು.
ಏಕೆಂದರೆ, ಭಾರತದ ಎಫ್ಟಿಪಿ ಈಗಾಗಲೇ ನಿಗದಿಯಾಗಿದೆ. ಜೊತೆಗೆ ಪಾಕಿಸ್ತಾನ ತಂಡದೊಂದಿದೆ ಐಸಿಸಿ ಟೂರ್ನಮೆಂಟ್ ಹೊರತುಪಡಿಸಿ ಮತ್ಯಾವುದೇ ಸರಣಿಯಲ್ಲಿ ಆಡುವ ಪ್ರಶ್ನೆಯಿಲ್ಲ. ಐಸಿಸಿ ಕೂಡ ಈ ಟೂರ್ನಿಗೆ ಅವಕಾಶ ನೀಡುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.
ಐಸಿಸಿ ಮಂಡಳಿ ಸಭೆಯಲ್ಲಿನ ಪ್ರಮುಖ ಅಂಶಗಳು
- ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂದಿನ ಎರಡು ವರ್ಷಗಳ ಅವಧಿಗೆ ಐಸಿಸಿಯ ಭಾಗವಾಗಲಿದ್ದಾರೆ.
- ದ್ವಿಪಕ್ಷೀಯ ಟೆಸ್ಟ್ ಸರಣಿಗಳಿಗೆ ಮೈದಾನದ ಅಂಪೈರ್ ಆಗಿ ತವರಿನ ಒಬ್ಬ ಮತ್ತು ತಟಸ್ಥ ಸ್ಥಳದ ಮತ್ತೊಬ್ಬ ಅಂಪೈರ್ ಕಾರ್ಯನಿರ್ವಹಿಸಲಿದ್ದಾರೆ. ಕೋವಿಡ್ ಕಾರಣ ತವರಿನ ಅಂಪೈರ್ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದರು, ಇದು ಕೆಲವು ಸರಣಿಗಳಲ್ಲಿ ಟೀಕೆಗೆ ಗುರಿಯಾಗಿತ್ತು.
- ಐಸಿಸಿ ಅಧ್ಯಕ್ಷ ಗ್ರೇಗ್ ಬಾರ್ಕ್ಲೇ ಅವರ 2 ವರ್ಷಗಳ ಅವಧಿ ಅಂತ್ಯವಾಗಿದ್ದು, ಹೊಸ ಅಧ್ಯಕ್ಷ ಸ್ಥಾನಕ್ಕೆ ನವೆಂಬರ್ನಲ್ಲಿ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಲಿದೆ.
ಇದನ್ನೂ ಓದಿ:'ರಾವತ್ ಭವಿಷ್ಯದ ಸ್ಟಾರ್': ಆರ್ಸಿಬಿ ನಾಯಕ ಡುಪ್ಲೆಸಿಸ್ ಗುಣಗಾನ