ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ರಮಿಜ್ ರಾಜಾ ಅವರನ್ನು ತೆಗೆದುಹಾಕಲಾಗಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಪ್ರಸ್ತುತ ಆಡಳಿತ ಮಂಡಳಿಯನ್ನು ವಿಸರ್ಜಿಸಲಾಗಿದೆ. ಮಂಡಳಿಯ ಪೋಷಕರೂ ಆಗಿರುವ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನ ಕ್ರಿಕೆಟ್ ಅಭಿವೃದ್ಧಿಗೆ 13 ಸದಸ್ಯರ ಸಮಿತಿಯನ್ನು ನಾಮನಿರ್ದೇಶನ ಮಾಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ರಮಿಜ್ ರಾಜಾ ವಜಾ - ಶಾಹಿದ್ ಅಫ್ರಿದಿ
ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ರಮಿಜ್ ರಾಜಾ ಅವರನ್ನು ವಜಾಗೊಳಿಸಲಾಗಿದೆ
![ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ರಮಿಜ್ ರಾಜಾ ವಜಾ Ramiz Raja removed as Pakistan Cricket Board chairman](https://etvbharatimages.akamaized.net/etvbharat/prod-images/768-512-17275613-461-17275613-1671671092748.jpg)
ಪಾಕಿಸ್ತಾನದ ಮಾಜಿ ನಾಯಕರಾದ ಶಾಹಿದ್ ಅಫ್ರಿದಿ ಮತ್ತು ಸನಾ ಮಿರ್ ಅವರನ್ನು ಒಳಗೊಂಡ ಸಮಿತಿಯ ಮುಖ್ಯಸ್ಥರಾಗಿ ಪಿಸಿಬಿ ಮಾಜಿ ಮುಖ್ಯಸ್ಥ ನಜಮ್ ಸೇಥಿ ಅವರನ್ನ ನೇಮಕ ಮಾಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಪಾಕಿಸ್ತಾನ 0-3 ಅಂತರದಲ್ಲಿ ಕಳೆದುಕೊಂಡಿದೆ. ರಮಿಜ್ ರಾಜಾ ಅಧಿಕಾರಾವಧಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಪಾಕ್ ವಿರುದ್ಧ ಸೆಣಸಾಣ ನಡೆಸಿದ್ದವು. ಇನ್ನು ಪಾಕಿಸ್ತಾನ ತಂಡ 2021 ರ T20 ವಿಶ್ವಕಪ್‌ನ ಸೆಮಿಫೈನಲ್ ಮತ್ತು 2022 ರ ಆವೃತ್ತಿಯ ಪಂದ್ಯಾವಳಿಯ ಫೈನಲ್ ತಲುಪಿ ಗಮನ ಸೆಳೆದಿತ್ತು. ಅಷ್ಟೇ ಅಲ್ಲ ಏಷ್ಯಾಕಪ್‌ನ ಫೈನಲ್‌ಗೂ ಪಾಕ್ ತಂಡ ತಲುಪಿದ ಸಾಧನೆ ಮಾಡಿತ್ತು. ಇದನ್ನು ಓದಿ: ವಿಶ್ವಕಪ್ ಗೆಲುವಿಗಾಗಿ ಸಾಕಷ್ಟು ಎದುರು ನೋಡುತ್ತಿದ್ದೆ: ಅರ್ಜೆಂಟೀನಾ ತಂಡದ ನಾಯಕ ಮೆಸ್ಸಿ