ಮುಂಬೈ :ಜೋಸ್ ಬಟ್ಲರ್ರ ಶತಕದ ನೆರವಿನಿಂದ ರಾಜಸ್ತಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 193 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ಸ್ ತಂಡ ಆರಂಭಿಕ ಆಘಾತ ಅನುಭವಿಸಿತು.
ಜೋಸ್ ಬಟ್ಲರ್ ಜೊತೆ ಕ್ರೀಸ್ಗಿಳಿದ ಯಶಸ್ವಿ ಜೈಸ್ವಾಲ್(1) ಒಂದಂಕಿ ಮೊತ್ತದಲ್ಲೇ ಔಟಾದರು. ಬಳಿಕ ಬಂದ ದೇವದತ್ತ ಪಡಿಕ್ಕಲ್(7) ನಿರಾಶೆ ಮೂಡಿಸಿದರು. ಈ ವೇಳೆ, ಜೊತೆಯಾದ ನಾಯಕ ಸಂಜು ಸ್ಯಾಮ್ಸನ್ (35) ಭರ್ಜರಿಯಾಗಿ ಬ್ಯಾಟ್ ಬೀಸುವ ಮೂಲಕ ಬಟ್ಲರ್ ಜೊತೆಗೂಡಿ 82 ರನ್‌ಗಳ ಜೊತೆಯಾಟವಾಡಿದರು. ಸ್ಯಾಮ್ಸನ್ ಔಟಾದ ಬಳಿಕ ಕ್ರೀಸ್ಗಿಳಿದ ವೆಸ್ಟ್ ಇಂಡೀಸ್ ದೈತ್ಯ ಶಿಮ್ರಾನ್ ಹೆಟ್ಮಾಯರ್ 14 ಎಸೆತಗಳಲ್ಲಿ 35 ರನ್ ಸಿಡಿಸಿದರು. ಇದರಲ್ಲಿ 3 ಸಿಕ್ಸರ್, 3 ಬೌಂಡರಿ ಇದ್ದವು.
ಸೀಸನ್ನ ಮೊದಲ ಶತಕ ಸಿಡಿಸಿದ ಬಟ್ಲರ್ :ಇನ್ನು ಇನಿಂಗ್ಸ್ ಆರಂಭದಿಂದಲೇ ಮುಂಬೈ ಇಂಡಿಯನ್ಸ್ ಬೌಲರ್ಗಳ ಬೆವರಿಳಿಸಿದ ಜೋಸ್ ಬಟ್ಲರ್ ಈ ಸೀಸನ್ ಮೊದಲ ಶತಕ ಸಾಧನೆ ಮಾಡಿದರು. 68 ಎಸೆತಗಳಲ್ಲಿ ಬರೋಬ್ಬರಿ 100 ರನ್ ಗಳಿಸುವ ಮೂಲಕ ತಂಡ ಬೃಹತ್ ಪೇರಿಸಲು ನೆರವಾದರು. ಬಟ್ಲರ್ ಇನಿಂಗ್ಸ್ಲ್ಲಿ 5 ಸಿಕ್ಸರ್, 11 ಬೌಂಡರಿ ಇದ್ದವು.