ಕರ್ನಾಟಕ

karnataka

ETV Bharat / sports

ದಂತಕಥೆ ಸಚಿನ್ ತೆಂಡೂಲ್ಕರ್ ಜೊತೆ ಮಾತನಾಡಿದ್ದು ನನ್ನ ಅದೃಷ್ಟ: ರಾಯಲ್ಸ್ ಆಟಗಾರ ಜೈಸ್ವಾಲ್ - ರಾಜಸ್ಥಾನ್ ರಾಯಲ್ಸ್

2ನೇ ಅವಧಿಯ ಐಪಿಎಲ್​​ಗಾಗಿ ದುಬೈನ ಹೋಟೆಲ್​ನಲ್ಲಿ ಕ್ವಾರಂಟೈನ್ ಆಗಿರುವ ಯುವ ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಸಚಿನ್ ತೆಂಡೂಲ್ಕರ್ ಜೊತೆ ಕಳೆದ ಕ್ಷಣಗಳನ್ನ ಹಂಚಿಕೊಂಡಿದ್ದಾರೆ.

rajasthan-royals-yashasvi-jaiswal
ಜೈಸ್ವಾಲ್

By

Published : Sep 8, 2021, 12:02 PM IST

ದುಬೈ: ರಾಜಸ್ಥಾನ್ ರಾಯಲ್ಸ್​ ತಂಡ ಆಟಗಾರ ಯಶಶ್ವಿ ಜೈಸ್ವಾಲ್​ ಕಳೆದ ಐಪಿಎಲ್​​ನಲ್ಲಿ ಮಿಂಚಿದ್ದರು. ಇದೀಗ ಕ್ರಿಕೆಟ್​​ ದಂತಕಥೆ ಸಚಿನ್ ತೆಂಡೂಲ್ಕರ್ ಬಗ್ಗೆ ಮಾತನಾಡಿದ್ದು, ಸಚಿನ್ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದಿದ್ದಾರೆ. ಓಮನ್ ತಂಡದ ವಿರುದ್ಧ ಮುಂಬೈ ತಂಡ ಪಂದ್ಯವಾಡಿದ್ದು, ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ ಜೊತೆ ಸಂವಾದ ನಡೆಸಲು ಅವಾಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದಿದ್ದಾರೆ.

ನಾನು ಓಮನ್​ಗೆ ತೆರಳುವ ಮುನ್ನ ಸಚಿನ್ ತೆಂಡೂಲ್ಕರ್ ಸಹ ಪ್ರವಾಸದಲ್ಲಿದ್ದಾರೆ ಎಂದು ತಿಳಿದು ಖುಷಿ ಪಟ್ಟಿದ್ದೆ. ಪ್ರವಾಸದುದಕ್ಕೂ ಅವರ ಜೊತೆ ಮಾತನಾಡಿದೆ. ಅಲ್ಲದೆ ಅವರ ಸಲಹೆಯಿಂದ ಸಾಕಷ್ಟು ಕಲಿತಿದ್ದೇನೆ ಎಂದು ಜೈಸ್ವಾಲ್​ ಮಾಹಿತಿ ತಿಳಿಸಿದ್ದಾರೆ.

ಅಲ್ಲದೆ ಮುಂದಿನ ಐಪಿಎಲ್ ದೃಷ್ಟಿಯಿಂದಲೂ ನನಗಿದು ಸಹಕಾರಿಯಾಗಲಿದೆ. ಓಮನ್ ವಿರುದ್ಧದ ಪಂದ್ಯದಲ್ಲೂ ರನ್ ಗಳಿಸುವಲ್ಲಿ ಅವರ ಸಲಹೆ ಉಪಯುಕ್ತವಾಯಿತು ಎಂದು ಜೈಸ್ವಾಲ್​ ಸಂತಸ ಹಂಚಿಕೊಂಡಿದ್ದಾರೆ.

ತೆಂಡೂಲ್ಕರ್​ ನನಗೆ ರೋಲ್ ಮಾಡೆಲ್​ ಇದ್ದಂತೆ. ಅವರೊಂದಿಗೆ ಕಳೆದ ಸಮಯ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ತಿಳಿಸಿದ ಸಲಹೆಯನ್ನ ಮುಂದೆ ನನ್ನ ಆಟದಲ್ಲಿ ಅಳವಡಿಸಿಕೊಂಡು ಇನ್ನಷ್ಟು ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸುತ್ತೇನೆ ಎಂದು ಯಶಸ್ವಿ ಜೈಸ್ವಾಲ್​ ತಿಳಿಸಿದ್ದಾರೆ.

ಇದನ್ನೂ ಓದಿ:ಕೋಚ್​ಗಳು ರಾಜೀನಾಮೆ ನೀಡುತ್ತಿದ್ದಂತೆ, ನಿವೃತ್ತಿ ಹಿಂಪಡೆದುಕೊಂಡ ವೇಗಿ ಅಮೀರ್​!

ABOUT THE AUTHOR

...view details