ಶಾರ್ಜಾ: ಪ್ಲೇ ಆಫ್ನಲ್ಲಿ ನಾಲ್ಕನೇ ಸ್ಥಾನವನ್ನು ನಿರ್ಧರಿಸುವ ಪ್ರಮುಖ ಪಂದ್ಯದಲ್ಲಿ ಕೆಕೆಆರ್ ತಂಡದ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್ ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಈಗಾಗಲೆ ಡೆಲ್ಲಿ, ಸಿಎಸ್ಕೆ ಮತ್ತು ಆರ್ಸಿಬಿ ಮೂರು ತಂಡಗಳು ಪ್ಲೇ ಆಫ್ ತಲುಪಿವೆ. ನಾಲ್ಕನೇ ಸ್ಥಾನಕ್ಕಾಗಿ ಕೆಕೆಆರ್, ಪಂಜಾಬ್, ಮುಂಬೈ ಮತ್ತು ರಾಜಸ್ಥಾನ್ ತಂಡಗಳು ಭಾರಿ ಪೈಪೋಟಿ ನಡೆಸುತ್ತಿವೆ. ಆದರೆ, 12 ಅಂಕವನ್ನು ಹೊಂದಿರುವ ಕೆಕೆಆರ್ ಈ ಪಂದ್ಯವನ್ನು ಗೆದ್ದರೂ ಅಥವಾ ಕಡಿಮೆ ಅಂತರದಿಂದ ಸೋತರೂ ಫ್ಲೇ ಆಫ್ಗೆ ಎಂಟ್ರಿಕೊಡಲಿದೆ.
ಈ ಪ್ರಮುಖ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಾಲ್ಕು ಬದಲಾವಣೆ ಮಾಡಿಕೊಂಡಿದೆ. ಮಿಲ್ಲರ್, ಲೂಯಿಸ್, ಶ್ರೇಯಸ್ ಗೋಪಾಲ್ ಮತ್ತು ಕುಲ್ದೀಪ್ ಯಾದವ್ ಬದಲಿಗೆ ಮೋರಿಸ್, ಲಿವಿಂಗ್ಸ್ಟೋನ್, ಜಯದೇವ್ ಉನಾದ್ಕಟ್ ಮತ್ತು ಅನುಜ್ ರಾವತ್ ತಂಡ ಸೇರಿಕೊಂಡಿದ್ದಾರೆ.
ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಕೆಕೆಆರ್ ನೀಡುವ ಗುರಿಯನ್ನು 9 ಓವರ್ಗಳಲ್ಲಿ ಮುಗಿಸಿದರೆ ರಾಯಲ್ಸ್ ಮುಂಬೈ, ಕೆಕೆಆರ್ ಮತ್ತು ಪಂಜಾಬ್ ತಂಡಗಳಿಗಿಂತ ಹೆಚ್ಚಿನ ರನ್ರೇಟ್ ಪಡೆಯಲಿದೆ. ಕೋಲ್ಕತ್ತಾ ನೈಟರ್ ರೈಡರ್ಸ್ ತಂಡಕ್ಕೆ ಸೌಥಿ ಬದಲಿಗೆ ಲಾಕಿ ಫರ್ಗುಸನ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಯಶಸ್ವಿ ಜೈಸ್ವಾಲ್, ಲಿಯಾಮ್ ಲಿವಿಂಗ್ಸ್ಟೋನ್, ಸಂಜು ಸ್ಯಾಮ್ಸನ್ (ನಾಯಕ/ಕೀಪರ್), ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಶಿವಂ ದುಬೆ, ಕ್ರಿಸ್ ಮೋರಿಸ್, ರಾಹುಲ್ ತೆವಾಟಿಯಾ, ಜಯದೇವ್ ಉನಾದ್ಕಟ್, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್):ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ಕೀಪರ್), ಶಕಿಬ್ ಅಲ್ ಹಸನ್, ಸುನೀಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ಇದನ್ನು ಓದಿ:ರಾಹುಲ್ ಆರ್ಭಟಕ್ಕೆ ಸಿಎಸ್ಕೆ ಧೂಳೀಪಟ: 13 ಓವರ್ಗಳಲ್ಲೇ ಪಂದ್ಯ ಮುಗಿಸಿದ ಪಂಜಾಬ್