ಮುಂಬೈ: ಸತತ 2 ಪಂದ್ಯಗಳ ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್ ತಂಡ ತನ್ನ 5ನೇ ಪಂದ್ಯದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಕೆಕೆಆರ್ ವಿರುದ್ಧ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಎರಡು ತಂಡಗಳು ಆಡಿರುವ 4 ಪಂದ್ಯಗಳಲ್ಲಿ ತಲಾ ಒಂದು ಜಯ ಮತ್ತು 4 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿವೆ. ಇಂದಿನ ಪಂದ್ಯದಲ್ಲಿ 2ನೇ ಗೆಲುವು ಎರಡೂ ತಂಡಕ್ಕೂ ಅನಿವಾರ್ಯವಾಗಿದ್ದು, ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿವೆ.
ರಾಜಸ್ಥಾನ್ ತಂಡ ಎರಡು ಬದಲಾವಣೆ ಮಾಡಿಕೊಂಡಿದ್ದು, ವೊಹ್ರಾ ಬದಲಿಗೆ ಯುವ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಗೋಪಾಲ್ ಬದಲಿಗೆ ಜಯದೇವ್ ಉನಾದ್ಕಟ್ರನ್ನು ಕಣಕ್ಕಿಳಿಸಿದೆ.