ಜೈಪುರ (ರಾಜಸ್ಥಾನ): ಮಾರ್ಚ್ 31 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಕ್ಕೆ ಗಾಯಗೊಂಡ ಪ್ರಸಿದ್ಧ್ ಕೃಷ್ಣ ಬದಲಿಗೆ ವೇಗಿ ಸಂದೀಪ್ ಶರ್ಮಾ ಅವರನ್ನು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡಕ್ಕೆ ಸೇರಿಸಿಕೊಂಡಿದೆ. ಈ ಬಗ್ಗೆ ಇಂದು ಆರ್‌ಆರ್ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. "ಸರಿ ಹಾಗಾದರೆ, ಇದನ್ನು ಅಧಿಕೃತಗೊಳಿಸುವುದು" ಎಂದು ರಾಯಲ್ಸ್ ಟ್ವಿಟ್ನಲ್ಲಿ ಬರೆದುಕೊಂಡಿದೆ.
ಪ್ರಸಿದ್ ಕೃಷ್ಣ ಅವರ ಬದಲಿ ಆಟಗಾರನಾಗಿ ವೇಗದ ಬೌಲರ್ ಸಂದೀಪ್ ಶರ್ಮಾ ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಅನ್ನು ಪ್ರತಿನಿಧಿಸುತ್ತಾರೆ. ಅವರ ಮೂಲ ಬೆಲೆ 50 ಲಕ್ಷಕ್ಕೆ ರಾಜಸ್ಥಾನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸಂದೀಪ್ ಶರ್ಮಾ ಐಪಿಎಲ್ನಲ್ಲಿ 100 ಕ್ಕೂ ಹೆಚ್ಚು ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. 104 ಪಂದ್ಯಗಳಲ್ಲಿ ಸಂದೀಪ್ ಶರ್ಮಾ 26.33 ಸರಾಸರಿ ಮತ್ತು 7.77 ಎಕಾನಮಿ ರೇಟ್‌ನಲ್ಲಿ ಒಟ್ಟು 114 ವಿಕೆಟ್‌ಗಳನ್ನು ಪಡೆದಿದ್ದಾರೆ. 4 ವಿಕೆಟ್ ತೆಗೆದು 20 ರನ್ ಬಿಟ್ಟುಕೊಟ್ಟದ್ದು ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶವಾಗಿದೆ. ಅವರು ಐಪಿಎಲ್ನಲ್ಲಿ ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ಗಳನ್ನು ಪ್ರತಿನಿಧಿಸಿದ್ದಾರೆ.
ಭಾರತದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಸೊಂಟದ ಒತ್ತಡದ ಮುರಿತದೊಂದಿಗೆ ಐಪಿಎಲ್ನಿಂದ ದೂರ ಉಳಿದಿದ್ದಾರೆ. 2023ರ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯುವ ವಿಶ್ವಕಪ್ನಲ್ಲಿ ಪ್ರಸಿದ್ಧ ಕೃಷ್ಣಾ ಭಾಗವಹಿಸುವ ನಿರೀಕ್ಷೆ ಇದ್ದು ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಆಗಸ್ಟ್‌ನಲ್ಲಿ ಭಾರತದ ಜಿಂಬಾಬ್ವೆಯ ಏಕದಿನ ಪ್ರವಾಸದ ನಂತರ ಪ್ರಸಿದ್ಧ್ ಅವರು ಕ್ರಿಕೆಟ್ ಆಡಿಲ್ಲ. ಅವರು ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್ ಎ ವಿರುದ್ಧದ ಭಾರತ ಎ ತಂಡದ ವೈಟ್-ಬಾಲ್ ಸರಣಿಗೆ ಆಯ್ಕೆಯಾದರು. ತಂಡಕ್ಕೆ ಆಯ್ಕೆ ಆದ ನಂತರ ಗಾಯಗೊಂಡರು.
ಅಂದಿನಿಂದ ಪ್ರಸಿದ್ಧ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿಗೆ ಒಳಗಾಗಿದ್ದಾರೆ. ಜನವರಿ-ಫೆಬ್ರವರಿಯಲ್ಲಿ ನಡೆಯಲಿರುವ ರಣಜಿ ಟ್ರೋಫಿ ನಾಕೌಟ್‌ಗಳ ಸಮಯದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಆರಂಭದಲ್ಲಿ ನಿರೀಕ್ಷಿಸಲಾಗಿತ್ತು. ದುರದೃಷ್ಟವಶಾತ್, ಗಾಯವು ಸಮರ್ಪಕವಾಗಿ ವಾಸಿಯಾಗಿಲ್ಲ.