ಕರ್ನಾಟಕ

karnataka

ETV Bharat / sports

ವಾರ್ನಿ ನೀವು ಎಂದೆಂದಿಗೂ ನಮ್ಮ ಕ್ಯಾಪ್ಟನ್‌, ಲೀಡರ್‌, ರಾಯಲ್ ಆಗಿರುತ್ತೀರಿ: ಶೇನ್‌ ವಾರ್ನ್‌ ನಿಧನಕ್ಕೆ RR ಭಾವನಾತ್ಮಕ ಸಂದೇಶ - ವಾರ್ನ್‌ ಬಗ್ಗೆ ಭಾವನಾತ್ಮಕ ಸಂದೇಶ ಬರೆದ ಆರ್‌ಆರ್‌

ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಶೇನ್‌ ವಾರ್ನ್‌ ಚಾಂಪಿಯನ್‌ ಆಗಿ ಮಾಡಿದ್ದರು. ವಾರ್ನ್‌ ಅವರ ನಿಧನಕ್ಕೆ ಆರ್‌ ಆರ್‌ ಕಂಪನಿ ಮಿಡಿದಿದೆ.

Rajasthan Royals pay tributes to Shane Warne
ವಾರ್ನಿ ನೀವು ಎಂದೆಂದಿಗೂ ನಮ್ಮ ಕ್ಯಾಪ್ಟನ್‌, ಲೀಡರ್‌, ರಾಯಲ್ ಆಗಿರುತ್ತೀರಿ: ಆರ್‌ಆರ್‌ ಭಾವನಾತ್ಮಕ ಸಂದೇಶ

By

Published : Mar 5, 2022, 11:08 AM IST

ನವದೆಹಲಿ: ರಾಜಸ್ಥಾನ್ ರಾಯಲ್ಸ್ ಐಪಿಎಲ್‌ ಮೊದಲ ಆವೃತ್ತಿಯಲ್ಲೇ ವಿಶ್ವದ ಕ್ರಿಕೆಟ್‌ ದಿಗ್ಗಜ ಶೇನ್‌ವಾರ್ನ್‌ ನಾಯಕತ್ವದಲ್ಲಿ ಚಾಂಪಿಯನ್‌ ಆಗಿತ್ತು. ನಿನ್ನೆ ಹಠಾತ್‌ ಹೃದಯಾಘಾತದಿಂದ ನಿಧನರಾಗಿರುವ ಶೇನ್‌ ವಾರ್ನ್‌ಗೆ ಆರ್‌ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಆರ್‌ಆರ್‌, ವಾರ್ನಿ ನೀವು ಎಂದೆಂದಿಗೂ ಕ್ಯಾಪ್ಟನ್‌, ಲೀಡರ್‌, ರಾಯಲ್ ಆಗಿರುತ್ತೀರಿ. ರೆಸ್ಟ್‌ ಇನ್‌ ಪೀಸ್‌ ಲೆಜೆಂಡ್‌ ಎಂದು ಕಂಬನಿ ಮಿಡಿದಿದೆ. ಶೇನ್ ವಾರ್ನ್.. ಈ ಹೆಸರು ಮ್ಯಾಜಿಕ್ ಅನ್ನು ಸೂಚಿಸುತ್ತದೆ. ನಮ್ಮ ಮೊದಲ ರಾಯಲ್; ಅಸಾಧ್ಯ ಎಂಬುದು ಕೇವಲ ಮಿಥ್ಯೆ ಎಂದು ನಮಗೆ ನಂಬುವಂತೆ ಮಾಡಿದ ವ್ಯಕ್ತಿ. ನಾಯಕ ನಡೆದಿದ್ದೇ ದಾರಿ, ಮಾತನಾಡಿದ್ದೇ ಮಾತು. ನಮ್ಮನ್ನು ಚಾಂಪಿಯನ್‌ ಆಗಿ ಮಾಡಿದರು ಎಂದು ಬರೆದುಕೊಂಡಿದೆ.

ತಾನು ಮುಟ್ಟಿದ್ದನ್ನೆಲ್ಲಾ ಚಿನ್ನವಾಗಿ ಪರಿವರ್ತಿಸಿದ ಮಾರ್ಗದರ್ಶಕ, ಈ ಸಮಯದಲ್ಲಿ ನಾವು ನಿಜವಾಗಿಯೂ ಏನನ್ನು ಅನುಭವಿಸುತ್ತೇವೆ ಎಂಬುದನ್ನು ವ್ಯಕ್ತಪಡಿಸಲು ನಮ್ಮಲ್ಲಿ ಪದಗಳಿಲ್ಲ. ಆದರೆ, ನಮಗೆ ತಿಳಿದಿರುವ ವಿಷಯವೆಂದರೆ ಜಗತ್ತು ಇಂದು ಬಡವಾಗಿದೆ, ಏಕೆಂದರೆ ಅದು ಅವನ ನಗುವಿಲ್ಲದೆ ಅಸ್ತಿತ್ವದಲ್ಲಿದೆ. ಅವನ ತೇಜಸ್ಸು ಮತ್ತು ಜೀವನವನ್ನು ಪೂರ್ಣವಾಗಿ ಬದುಕುವ ಅವರ ಮನೋಭಾವ. ಪ್ರಪಂಚದಾದ್ಯಂತ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳಂತೆ ನಾವು ಸಂಪೂರ್ಣವಾಗಿ ಹೃದಯವಿದ್ರಾವಕರಾಗಿದ್ದೇವೆ ಎಂದಿದೆ.

ಇದಕ್ಕೂ ಮುನ್ನ, ಬಾಲಿವುಡ್‌ ನಟಿ ಹಾಗೂ ರಾಜಸ್ಥಾನ್ ರಾಯಲ್ಸ್ ಐಪಿಎಲ್ ತಂಡದ ಮಾಜಿ ಸಹ - ಮಾಲೀಕಿ ಶಿಲ್ಪಾ ಶೆಟ್ಟಿ ಇನ್‌ಸ್ಟಾದಲ್ಲಿ ಶೇನ್‌ ವಾರ್ನ್‌ ಅವರೊಂದಿಗೆ ಇರುವ ಎರಡು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ವಾರ್ನ್ 2008 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಇವರ ನಾಯಕತ್ವದಲ್ಲಿ ಇಂಡಿಯನ್‌ ಪ್ರೀಯರ್‌ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲೇ ಈ ಪ್ರಶಸ್ತಿ ಗೆದ್ದುಕೊಂಡಿತು.

ಇದನ್ನೂ ಓದಿ:'ಭಾರತೀಯರ ಹೃದಯದಲ್ಲಿ ನಿಮಗಿದೆ ವಿಶೇಷ ಸ್ಥಾನ': ವಾರ್ನ್​ ನಿಧನಕ್ಕೆ ಸಚಿನ್​, ಕೊಹ್ಲಿ, ರೋಹಿತ್ ಸಂತಾಪ

ABOUT THE AUTHOR

...view details