ಬ್ರಿಸ್ಬೇನ್(ಆಸ್ಟ್ರೇಲಿಯಾ):ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ಇಂದು ನಡೆಯಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್ನಡುವಣ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಮೂರು ಅಭ್ಯಾಸ ಪಂದ್ಯಗಳ ಪೈಕಿ ಭಾರತ ಒಂದರಲ್ಲಿ ಸೋಲು ಮತ್ತು ಮತ್ತೊಂದರಲ್ಲಿ ಗೆಲುವು ಸಾಧಿಸಿದೆ.
ಸೋಮವಾರ ಇಲ್ಲಿ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ಆತಿಥೇಯ ಆಸ್ಟ್ರೇಲಿಯಾವನ್ನು 6 ರನ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಕೆ ಎಲ್ ರಾಹುಲ್ (57) ಮತ್ತು ಸೂರ್ಯಕುಮಾರ್ ಯಾದವ್ (50) ಅರ್ಧಶತಕಗಳ ನೆರವಿನಿಂದ ತಂಡ 7 ವಿಕೆಟ್‌ಗೆ 186 ರನ್ ಗುರಿ ನೀಡಿತ್ತು. ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ 54 ಎಸೆತಗಳಲ್ಲಿ 76 ರನ್‌ಗಳೊಂದಿಗೆ ಫಾರ್ಮ್‌ಗೆ ಮರಳಿದ್ದರು. ಆದರೂ ಅವರಿಗೆ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.