ಮೆಲ್ಬೋರ್ನ್: ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೆಜ್ ಪಂದ್ಯಕ್ಕೆ ಮಳೆರಾಯ ಅಡ್ಡಿ ಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಮಳೆಗೆ ತುತ್ತಾಗಬಹುದಾಗಿದೆ. ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ, 80 ರಿಂದ 90 ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಸುಮಾರು 1 ಮಿಮೀ ನಿಂದ 5 ಮಿಮೀ ನಡುವೆ ಮಳೆ ಸುರಿಯಬಹುದು ಎಂದು ಹೇಳಿದ ಹವಾಮಾನ ಇಲಾಖೆ ಚಂಡಮಾರುತದ ಮುನ್ಸೂಚನೆಯೂ ನೀಡಿದೆ.
ಶುಕ್ರವಾರ ಸಂಜೆ, ಮೆಲ್ಬೋರ್ನ್‌ನಲ್ಲಿ ತುಂತುರು ಮಳೆಯಾಗಿದೆ. ಭಾನುವಾರದಂದು ಇದೇ ರೀತಿಯ ಮಳೆ ಮುಂದುವರಿಯಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಉಂಟುಮಾಡಬಹುದಾಗಿದೆ. ಆದರೆ, ಹವಾಮಾನ ವೈಪರೀತ್ಯದ ಬಗ್ಗೆ ತಕ್ಕಮಟ್ಟಿನ ಕಲ್ಪನೆ ಹೊಂದಿರುವ ಸ್ಥಳೀಯರು ಪಂದ್ಯ ನಡೆಯಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿರುವುದು ಇದೇ ಮೊದಲಲ್ಲ. 2016 ರಲ್ಲಿ ಎರಡು ನೆರೆಯ ದೇಶಗಳು ಈಡನ್ ಗಾರ್ಡನ್ಸ್‌ನಲ್ಲಿ ಪಂದ್ಯ ಆಡುತ್ತಿದ್ದಾಗ ಮಳೆ ಅಡ್ಡಿವುಂಟು ಮಾಡಿರುವುನ್ನು ಗಮನಾರ್ಹ ಸಂಗತಿ.
ಈಡನ್‌ನಲ್ಲಿ ನವೀಕರಿಸಿದ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಮಳೆಯಿಂದ ಪಂದ್ಯ ರದ್ದಾದ್ರೆ ವಿಕ್ಟೋರಿಯಾದ ರಾಜ್ಯ ಕ್ರಿಕೆಟ್ ಸಂಸ್ಥೆಯು ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಸಂಪನ್ಮೂಲಗಳೊಂದಿಗೆ ಸುಸಜ್ಜಿತವಾಗಿದೆ. ಈ ಆಟಕ್ಕೆ ಗಳಿಸಿದ ಜಾಹೀರಾತು ಆದಾಯವು ಇತರ ಎಲ್ಲ ಆಟಗಳನ್ನು ಮೀರಿಸುವ ಕಾರಣ ಭಾರತ-ಪಾಕಿಸ್ತಾನ ಪಂದ್ಯವನ್ನು ನಡೆಸದಿದ್ದರೆ ಪ್ರಸಾರಕರು ನಷ್ಟವನ್ನು ಅನುಭವಿಸುತ್ತಾರೆ. ಅಂತಹ ಸನ್ನಿವೇಶದಲ್ಲಿ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ವಿಕ್ಟೋರಿಯಾ ರಾಜ್ಯ ಕ್ರಿಕೆಟ್ ಸಂಸ್ಥೆಯು ಟಿಕೆಟ್‌ಗಳ ಸಂಪೂರ್ಣ ಬೆಲೆಯನ್ನು ಮರು ಪಾವತಿಸಬೇಕಾಗಬಹುದು.
ಓದಿ:ಆರಂಭಕ್ಕೂ ಮುನ್ನ ಹೊಡೆತ: ನೆಟ್ಸ್‌ನಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ ಪಾಕ್ ಆಟಗಾರ