ಮುಂಬೈ: ಶುಕ್ರವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಪಂಜಾಬ್ ನೀಡಿದ್ದ 190 ರನ್ಗಳ ಗುರಿಯನ್ನು ಟೈಟನ್ಸ್ 4 ವಿಕೆಟ್ ಕಳೆದುಕೊಂಡು ತಲುಪಿತು.
ಗೆಲುವಿಗೆ ಕೊನೆಯ 2 ಎಸೆತಗಳಲ್ಲಿ 12 ರನ್ಗಳ ಅಗತ್ಯವಿತ್ತು. ಒಟಿಯನ್ ಸ್ಮಿತ್ ಎಸೆದ ಆ ಓವರ್ನ ಕೊನೆಯ 2 ಎಸೆತಗಳನ್ನೂ ರಾಹುಲ್ ತೆವಾಟಿಯಾ ಸಿಕ್ಸರ್ಗಟ್ಟುವ ಮೂಲಕ ಹೊಸ ಫ್ರಾಂಚೈಸಿಗೆ ರೋಚಕ ಜಯ ತಂದುಕೊಟ್ಟರು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಕೊನೆಯ ಎರಡು ಎಸೆತಗಳಲ್ಲಿ 12 ರನ್ ಅಗತ್ಯವಿದ್ದಾಗ 2 ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿದ 2ನೇ ಬ್ಯಾಟರ್ ಎನಿಸಿಕೊಂಡರು.