ಸೆಂಚುರಿಯನ್:ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಪ್ರಾಬಲ್ಯ ಸಾಧಿಸಿದೆ. ಕನ್ನಡಿಗ ಕೆಎಲ್ ರಾಹುಲ್ ಶತಕದ ನೆರವಿನಿಂದ ಕೊಹ್ಲಿಪಡೆ ಮೊದಲ ದಿನ 3 ವಿಕೆಟ್ ಕಳೆದುಕೊಂಡು 272 ರನ್ಗಳಿಸಿದೆ.
ಸೆಂಚುರಿಯನ್ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಟಾಸ್ ಗೆದ್ದ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಜೋಡಿ ಮಯಾಂಕ್ ಮತ್ತು ರಾಹುಲ್ ಮೊದಲ ವಿಕೆಟ್ಗೆ 117 ರನ್ಗಳ ಭರ್ಜರಿ ಆರಂಭ ಒದಗಿಸಿಕೊಟ್ಟರು.
ಮಯಾಂಕ್ ಅಗರ್ವಾಲ್ 123 ಎಸೆತಗಳಲ್ಲಿ 9 ಬೌಂಡರಿ ಸಹಿತ 60 ರನ್ಗಳಿಸಿ ಲುಂಗಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಚೇತೇಶ್ವರ್ ಪೂಜಾರ ಅದೇ ಓವರ್ನ ನಂತರದ ಎಸೆತದಲ್ಲೇ ಗೋಲ್ಡನ್ ಡಕ್ ಆಗಿ ನಿರಾಸೆ ಮೂಡಿಸಿದರು.
ನಂತರ ರಾಹುಲ್ ಜೊತೆಯಾದ ನಾಯಕ ಕೊಹ್ಲಿ 3ನೇ ವಿಕೆಟ್ ಜೊತೆಯಾಟಕ್ಕೆ 82 ರನ್ಗಳನ್ನು ಸೇರಿಸಿದರು. 35 ರನ್ಗಳಿಸಿದ್ದ ವಿರಾಟ್ ಕೊಹ್ಲಿ ಕೂಡ ಎಂಗಿಡಿ ಬೌಲಿಂಗ್ನಲ್ಲಿ ಸ್ಲಿಪ್ನಲ್ಲಿದ್ದ ಮಲ್ಡರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.