ಕರ್ನಾಟಕ

karnataka

ETV Bharat / sports

'ಪ್ರೀತಿ ಪಡೆಯದ ಜನರು ದ್ವೇಷ ಕಾರುತ್ತಿದ್ದಾರೆ, ಅವರನ್ನು ಕ್ಷಮಿಸಿ': ಕೊಹ್ಲಿಗೆ ಧೈರ್ಯ ತುಂಬಿದ ರಾಹುಲ್‌ ಗಾಂಧಿ - Rape Threats To Kohli's Daughter

9 ತಿಂಗಳ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುವುದು ಅತ್ಯಂತ ಅವಮಾನಕರ ಸಂಗತಿ. ಈ ತಂಡ ನಮ್ಮ ದೇಶವನ್ನು ಸಾವಿರಾರು ಬಾರಿ ಹೆಮ್ಮೆ ಪಡುವಂತೆ ಮಾಡಿದೆ. ಆದರೆ ಒಮ್ಮೆ ಸೋಲು ಕಂಡಿದ್ದಕ್ಕೆ ಈ ರೀತಿ ಮೂರ್ಖತನದಿಂದ ವರ್ತಿಸುವುದೆಷ್ಟು ಸರಿ? ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಳಿವಾಲ್​ ಟ್ವಿಟರ್​ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡಾ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

Rahul Gandhi On Rape Threats To Kohli's Daughter
ರಾಹುಲ್ ಗಾಂಧಿ ವಿರಾಟ್ ಕೊಹ್ಲಿ

By

Published : Nov 2, 2021, 7:54 PM IST

ನವದೆಹಲಿ: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಸೋತ ಪಂದ್ಯದಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ತೋರಿದ್ದ ಮೊಹಮ್ಮದ್ ಶಮಿ ಪರ ಮಾತನಾಡಿದ್ದಕ್ಕೆ ವಿರಾಟ್​ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿರುವುದಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕಿಡಿಕಾರಿ, ಭಾರತ ತಂಡದ ನಾಯಕನ ಬೆನ್ನಿಗೆ ನಿಂತಿದ್ದಾರೆ.

"ಪ್ರೀತಿಯ ವಿರಾಟ್​, ಈ ಜನರು ತಮ್ಮ ಮನಸ್ಸಿನ ತುಂಬಾ ಕೇವಲ ದ್ವೇಷವನ್ನೇ ತುಂಬಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಯಾರೊಬ್ಬರೂ ಪ್ರೀತಿಯನ್ನು ನೀಡಿಲ್ಲ, ಅವರನ್ನು ಕ್ಷಮಿಸಿ, ತಂಡವನ್ನು ರಕ್ಷಣೆ ಮಾಡಿ" ಎಂದು ರಾಹುಲ್ ಮಂಗಳವಾರ ಟ್ವೀಟ್​ ಮಾಡಿದ್ದಾರೆ.

ಇದಕ್ಕೂ ಮುನ್ನ, ದೆಹಲಿಯ ಮಹಿಳಾ ಆಯೋಗ ಕೂಡ ಕೊಹ್ಲಿ ಮಗಳಿಗೆ ಬೆದರಿಕೆ ಹಾಕಿದ್ದವರ ವಿರುದ್ಧ ತೆಗೆದುಕೊಂಡಿರುವ ಕ್ರಮದ ಬಗ್ಗೆ ನವೆಂಬರ್​ 8ರೊಳಗೆ ಮಾಹಿತಿ ನೀಡುವಂತೆ ದೆಹಲಿ ಮಹಿಳಾ ಆಯೋಗ ದೆಹಲಿ ಪೊಲೀಸರಿಗೆ ನೋಟಿಸ್​ ನೀಡಿತ್ತು.

9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುವುದು ತುಂಬಾ ಅವಮಾನಕರ ಸಂಗತಿ. ಈ ತಂಡ ನಮ್ಮ ದೇಶವನ್ನು ಸಾವಿರಾರು ಬಾರಿ ಹೆಮ್ಮೆಪಡುವಂತೆ ಮಾಡಿದೆ. ಆದರೆ ಒಮ್ಮೆ ಸೋಲು ಕಂಡಿದ್ದಕ್ಕೆ ಈ ರೀತಿ ಮೂರ್ಖತನದಿಂದ ವರ್ತಿಸುವುದು ಎಷ್ಟು ಸರಿ? ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಳಿವಾಲ್​ ಟ್ವಿಟರ್​ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಕೊಹ್ಲಿ ಪುತ್ರಿಗೆ ಕಿಡಿಗೇಡಿಗಳ ಬೆದರಿಕೆ: ದೆಹಲಿ ಪೊಲೀಸರಿಗೆ ಮಹಿಳಾ ಆಯೋಗದಿಂದ ನೋಟಿಸ್

ABOUT THE AUTHOR

...view details