ಮುಂಬೈ: ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆಯಲ್ಲಿ ನಡೆದ 15ನೇ ಐಪಿಎಲ್ ಆವೃತ್ತಿಯ 37ನೇ ಪಂದ್ಯದಲ್ಲಿ ನಿಧಾನಗತಿ ಓವರ್ ಪ್ರದರ್ಶನಕ್ಕಾಗಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ಗೆ ಐಪಿಎಲ್ ಆಡಳಿತ ಮಂಡಳಿ 24 ಲಕ್ಷ ರೂಗಳ ದಂಡ ವಿಧಿಸಿದೆ.
ಭಾನುವಾರ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ನಾಯಕ ಕೆಎಲ್ ರಾಹುಲ್ ಅಜೇಯ ಶತಕದ ನೆರವಿನಿ 20 ಓವರ್ಗಳಲ್ಲಿ 168 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಲಾಗದೇ ಮುಂಬೈ ಕೇವಲ 132 ರನ್ಗಳಿಸಿ 36 ರನ್ಗಳ ಸೋಲು ಕಂಡಿತು.
ಪಂದ್ಯದಲ್ಲಿ ರಾಹುಲ್ ಶತಕಗಳಿಸಿದ್ದಕ್ಕೆ ಪಂದ್ಯಶ್ರೇಷ್ಠ, ಹೆಚ್ಚು ಬೌಂಡರಿ, ಹೆಚ್ಚು ಸಿಕ್ಸರ್, ಡ್ರೀಮ್ ಇಲೆವೆನ್ ಗೇಮ್ ಚೇಂಜರ್, ಸ್ಟ್ರೈಕ್ರೇಟ್ ಸೇರಿದಂತೆ ಈ ಪಂದ್ಯದಲ್ಲಿ ಅವರು 6 ಪ್ರಶಸ್ತಿಗಳ ಪಡೆಯುವ ಮೂಲಕ 6 ಲಕ್ಷ ರೂ.ಗಳನ್ನು ಜೇಬಿಗಿಳಿಸಿದ್ದರು. ಆದರೆ, ಚೇಸಿಂಗ್ ವೇಳೆ ಸ್ಲೋ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕೆ 24 ಲಕ್ಷ ರೂಗಳನ್ನು ದಂಡವಾಗಿ ತೆರುವಂತಾಗಿದೆ.