ನವದೆಹಲಿ:ರಾಹುಲ್ ದ್ರಾವಿಡ್ ಯಾವಾಗಲೂ ನನಗೆ ನನ್ನ ನೈಸರ್ಗಿಕ ಆಕ್ರಮಣಕಾರಿ ಆಟಕ್ಕೆ ಒತ್ತುಕೊಡು ಎಂದು ಸಲಹೆ ನೀಡುತ್ತಿದ್ದರೂ ಹಾಗೂ ತಮ್ಮ ಅಥವಾ ಯಾವುದೇ ಮಾಜಿ ಕ್ರಿಕೆಟಿಗರನ್ನು ಕಾಪಿ ಮಾಡುವ ಅಗತ್ಯವಿಲ್ಲ ಎನ್ನುತ್ತಿದ್ದರು ಎಂದು ಭಾರತ ತಂಡದ ಭವಿಷ್ಯದ ಸ್ಟಾರ್ ಆಟಗಾರ ಪೃಥ್ವಿ ಶಾ ಹೇಳಿದ್ದಾರೆ.
" ನಾವು ರಾಹುಲ್ ಸರ್ ಅವರೊಂದಿಗೆ ಸುಮಾರು ಎರಡು ವರ್ಷಗಳ ಕಾಲ (2018 ರ 19 ವರ್ಷದೊಳಗಿನವರ ವಿಶ್ವಕಪ್ಗೆ ಮುಂಚಿತವಾಗಿ) ಪ್ರವಾಸ ಮಾಡಿದ್ದೆವು. ಅವರಿಗಿಂತ ನಾವು ತುಂಬಾ ವಿಭಿನ್ನರು ಎಂದು ಅವರಿಗೆ ತಿಳಿದಿತ್ತು. ಆದರೆ, ಅವರು ನಮ್ಮನ್ನು ಎಂದಿಗೂ ಅವರಂತೆ (ದ್ರಾವಿಡ್) ಇರಬೇಕು ಎಂದು ಒತ್ತಾಯಿಸುತ್ತಿರಲಿಲ್ಲ. ಅವರು ನನ್ನ ಆಟವನ್ನು ಎಂದಿಗೂ ಬದಲಾಯಿಸಲು ಹೇಳುತ್ತಿರಲಿಲ್ಲ. ನನ್ನ ನೈಸರ್ಗಿಕ ಆಟವನ್ನು ಆಡಲು ಪ್ರೋತ್ಸಾಹಿಸುತ್ತಿದ್ದರು. ಏಕೆಂದರೆ ನಾನು ಪವರ್ಪ್ಲೇ ಓವರ್ಗಳನ್ನು ಯಶಸ್ವಿಯಾಗಿ ಆಡಿದರೆ ನನ್ನನ್ನು ಔಟ್ ಮಾಡುವುದು ಕಷ್ಟ ಎಂದು ಅವರು ತಿಳಿದಿದ್ದರು" ಎಂದು ಶಾ ಕ್ರಿಕ್ ಬಜ್ ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.