ಅಹ್ಮದಾಬಾದ್: ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿರುವ ಶಿಖರ್ ಧವನ್ಗಿಂತ ಕೇವಲ 19 ರನ್ಗಳ ಹಿಂದಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಆರೆಂಜ್ ಕ್ಯಾಪ್ ಪಡೆಯುವ ಅವಕಾಶವಿತ್ತಾದರೂ ಕೇವಲ ರಾಹುಲ್ 19 ರನ್ಗಳಿಸಿ ಔಟಾಗಿದ್ದರು. ಒಟ್ಟಾರೆ ರಾಹುಲ್ 6 ಪಂದ್ಯಗಳಿಂದ 3 ಅರ್ಧಶತಕ ಸಹಿತ 240 ರನ್ಗಳಿಸಿದ್ದಾರೆ. ಅಗ್ರಸ್ಥಾನದಲ್ಲಿರುವ ಧವನ್ 5 ಇನ್ನಿಂಗ್ಸ್ಗಳಿಂದ 259 ರನ್ಗಳಿಸಿದ್ದು, ಇಂದಿನ ಪಂದ್ಯದಲ್ಲೂ ಕೂಡ ಒಂದುಷ್ಟು ರನ್ ಸೇರಿಸಿ ಕಿತ್ತಳೆ ಟೋಪಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲಿದ್ದಾರೆ.
3ನೇ ಸ್ಥಾನದಲ್ಲಿ ಪ್ಲೆಸಿಸ್(214), 4ರಲ್ಲಿ ಬೈರ್ಸ್ಟೋವ್(211), ರೋಹಿನ್ ಶರ್ಮಾ (201) ನಂತರದ ಸ್ಥಾನದಲ್ಲಿದ್ದಾರೆ.