ಕರ್ನಾಟಕ

karnataka

ETV Bharat / sports

ಕೋವಿಡ್​ ಲಸಿಕೆಯ ಮೊದಲ ಡೋಸ್​ ಪಡೆದ ಕ್ರಿಕೆಟಿಗ ಅಜಿಂಕ್ಯ ರಹಾನೆ

32 ವರ್ಷದ ರಹಾನೆ ಇಂಗ್ಲೆಂಡ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಶನಿವಾರ ಘೋಷಿಸಿದ 20 ಸದಸ್ಯರ ತಂಡದಲ್ಲಿ ತಮ್ಮ ಉಪನಾಯಕ ಸ್ಥಾನವನ್ನು ಉಳಿಸಿಕೊಂಡಿದ್ದಾರೆ..

ಅಜಿಂಕ್ಯ ರಹಾನೆ ಕೋವಿಡ್​ ಲಸಿಕೆ
ಅಜಿಂಕ್ಯ ರಹಾನೆ ಕೋವಿಡ್​ ಲಸಿಕೆ

By

Published : May 8, 2021, 3:31 PM IST

ಮುಂಬೈ : ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಶನಿವಾರ ಕೋವಿಡ್​ ಲಸಿಕೆಯ ಮೊದಲ ಡೋಸ್​ ಪಡೆದಿದ್ದಾರೆ.

"ಇಂದು ನಾನು ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದಿದ್ದೇನೆ. ಒಂದು ವೇಳೆ ನೀವು ಲಸಿಕೆ ಪಡೆಯಲು ಅರ್ಹ ವಯೋಮಾನದವರಾಗಿದ್ದರೆ, ಪ್ರತಿಯೊಬ್ಬರು ನೋಂದಣಿ ಮಾಡಿಕೊಳ್ಳಿ ಮತ್ತು ನೀವಾಗಿಯೇ ಲಸಿಕೆ ಪಡೆದುಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ" ಎಂದು ಲಸಿಕೆ ಪಡೆಯುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

​ಗುರುವಾರ ಭಾರತ ತಂಡದ ಹಿರಿಯ ಬ್ಯಾಟ್ಸ್​ಮನ್ ಶಿಖರ್ ಧವನ್​ ಕೂಡ ಮೊದಲ ಡೋಸ್​ ಲಸಿಕೆಯನ್ನು ಪಡೆದಿದ್ದರು. ಅವರೂ ಕೂಡ ಪ್ರತಿಯೊಬ್ಬರು ಅಸಡ್ಡೆ ತೋರದೇ ತಾವಾಗಿಯೇ ಲಸಿಕೆ ಪಡೆದುಕೊಳ್ಳಿ ಎಂದು ಮನವಿ ಮಾಡಿದ್ದರು.

ಇನ್ನು, 32 ವರ್ಷದ ರಹಾನೆ ಇಂಗ್ಲೆಂಡ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಶನಿವಾರ ಘೋಷಿಸಿದ 20 ಸದಸ್ಯರ ತಂಡದಲ್ಲಿ ತಮ್ಮ ಉಪನಾಯಕ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಜೂನ್ 18ರಿಂದ 22ರವರೆಗೆ ಸೌತಾಂಪ್ಟನ್​ನ ಏಜಸ್ ಬೌಲ್​ನಲ್ಲಿ ಡಬ್ಲ್ಯೂಟಿಸಿ ಫೈನಲ್ ಪಂದ್ಯ ನಡೆಯಲಿದೆ.

ಇದನ್ನು ಓದಿ:ಕನ್ನಡಿಗ, ಕೆಕೆಆರ್​ ಪ್ಲೇಯರ್​ ಪ್ರಸಿದ್ಧ್ ಕೃಷ್ಣಗೆ ಕೊರೊನಾ ದೃಢ

ABOUT THE AUTHOR

...view details