ಕರ್ನಾಟಕ

karnataka

ETV Bharat / sports

ಒಂದೇ ಪಂದ್ಯದಲ್ಲಿ ಪಾಕಿಸ್ತಾನದ ವಾಸೀಮ್ ಅಕ್ರಮ್, ಅಫ್ರಿದಿ ದಾಖಲೆ ಹಿಂದಿಕ್ಕಿದ ಅಶ್ವಿನ್ - 2021ರಲ್ಲಿ ಹೆಚ್ಚು ಟೆಸ್ಟ್ ವಿಕೆಟ್​

ಆರ್​ ಅಶ್ವಿನ್ ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ವಿಲ್​ ಯಂಗ್​, ಕೈಲ್ ಜೇಮಿಸನ್ ಮತ್ತು ಸಮರ್​ವಿಲ್​ ವಿಕೆಟ್ ಪಡೆದು ವಾಸೀಮ್​ ಅಕ್ರಮ್​ ಮತ್ತು ಅಫ್ರಿದಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

R Ashwin Overtakes  Wasim Akram
ವಾಸೀಮ್ ಅಕ್ರಮ್ ದಾಖಲೆ ಮುರಿದ ಅಶ್ವಿನ್

By

Published : Nov 27, 2021, 7:43 PM IST

ಕಾನ್ಪುರ: ಭಾರತ ತಂಡದ ಸ್ಟಾರ್​ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ಇಬ್ಬರು ಪಾಕಿಸ್ತಾನಿ ಬೌಲರ್​ಗಳ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.

ಅಶ್ವಿನ್ ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ವಿಲ್​ ಯಂಗ್​, ಕೈಲ್ ಜೇಮಿಸನ್ ಮತ್ತು ಸಮರ್​ವಿಲ್​ ವಿಕೆಟ್ ಪಡೆದರು.

ಕೈಲ್​ ಜೇಮಿಸನ್​ ವಿಕೆಟ್​ ಪಡೆಯುತ್ತಿದ್ದಂತೆ ಟೆಸ್ಟ್​ ಕ್ರಿಕೆಟ್​ನಲ್ಲಿ 4 ಅಶ್ವಿನ್​ ಪಾಕ್​ ಮಾಜಿ ವೇಗಿ ವಾಸೀಮ್(414)ರನ್ನು ಹಿಂದಿಕ್ಕಿದರು. ಅಶ್ವಿನ್ ಈ ಪಂದ್ಯದ 3 ವಿಕೆಟ್​ ಸೇರಿದಂತೆ ಟೆಸ್ಟ್​ನಲ್ಲಿ 416 ವಿಕೆಟ್ ಪಡೆದಿದ್ದಾರೆ.

ಇದಕ್ಕೂ ಮುನ್ನ ಟಾಮ್ ಲೇಥಮ್ ಜೊತೆಗೂಡಿ 151 ರನ್​ಗಳ ಜೊತೆಯಾಟ ಕಿವೀಸ್​ ಪದಾರ್ಪಣೆ ಮಾಡಿದ್ದ ವಿಲ್​ ಯಂಗ್​ ವಿಕೆಟ್ ಪಡೆಯುವ ಮೂಲಕ 2021ರಲ್ಲಿ ಗರಿಷ್ಠ ಟೆಸ್ಟ್​ ವಿಕೆಟ್ ಪಡೆದ ಬೌಲರ್​ ಎನಿಸಿಕೊಂಡರು. ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಪಂದ್ಯ ಸೇರಿದಂತೆ 2021ರಲ್ಲಿ 8 ಪಂದ್ಯಗಳಿಂದ 39 ವಿಕೆಟ್​ ಪಡೆದಿದ್ದಾರೆ. ಅಶ್ವಿನ್ 7 ಪಂದ್ಯಗಳಿಂದ 41 ವಿಕೆಟ್ ಪಡೆದಿದ್ದಾರೆ.

ಅಶ್ವಿನ್​ 80 ಪಂದ್ಯಗಳಿಂದ 416 ವಿಕೆಟ್ ಪಡೆದಿರುವ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದ್ದಾರೆ. ಭಾರತೀಯರ ಲಿಸ್ಟ್​ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಅನಿಲ್​ ಕುಂಬ್ಳೆ(619), ಕಪೀಲ್ ದೇವ್​(434), ಹರ್ಭಜನ್​ ಸಿಂಗ್(417) ವಿಕೆಟ್ ಪಡೆದಿದ್ದಾರೆ.

ಅಶ್ವಿನ್ ಎರಡನೇ ಇನ್ನಿಂಗ್ಸ್​ನಲ್ಲಿ ಇನ್ನೆರಡು ವಿಕೆಟ್ ಪಡೆದರೆ ಹರ್ಭಜನ್ ಸಿಂಗ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

ಇದನ್ನೂ ಓದಿ:ತಮ್ಮ 4ನೇ ಟೆಸ್ಟ್​ ಪಂದ್ಯದಲ್ಲಿ 5ನೇ ಬಾರಿ 5 ವಿಕೆಟ್ ಪಡೆದು ದಾಖಲೆ ಬರೆದ ಅಕ್ಷರ್ ಪಟೇಲ್!!

ABOUT THE AUTHOR

...view details